ಫೆ.25 ರಂದು ಎಲ್ಲರ ನಿರೀಕ್ಷೆಯ “ಸಮಾಪ್ತಿ” ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ

ಕುಂದಾಪುರದ ಹೊಸ ಪ್ರತಿಭೆಗಳಿಂದ ನಿರ್ಮಾಣವಾದ ಸಮಾಪ್ತಿ ಚಿತ್ರದ ಟ್ರೈಲರ್ ಇದೇ ತಿಂಗಳ 25 ರಂದು ಕುಂದಾಪುರದಲ್ಲಿ ಬಿಡುಗಡೆಗೊಳ್ಳಲಿದೆ.

ಇಕ್ಬಾಲ್ ಎಸ್ ಗುಲ್ವಾಡಿ ಅವರ ಕನಸಿನ ಕುಸಾದ ‘ಸಮಾಪ್ತಿ’ ಚಿತ್ರಕ್ಕೆ ಅವರೇ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಗಾಂಜಾ, ಡ್ರಗ್ಸ್’ಗಳಂತಹ ಮಾದಕ ದ್ರವ್ಯಗಳಿಗೆ ಸಿಲುಕಿ ಒದ್ದಾಡುತ್ತಿರುವುದನ್ನು ಕಂಡು, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ನಿರ್ದೇಶಕರು.

ಕುಂದಾಪುರದ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರದ ಚಿತ್ರೀಕರಣ ಮಾಡಿದ್ದು, ಸುಂದರವಾಗಿ ಮೂಡಿಬಂದಿದೆ ಎಂಬುದು ನಿರ್ದೇಶಕರ ಮಾತು.

ಯುವ ನಟ ಗ್ಲಾವಿನ್ ಡೇಸಾ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಉತ್ತಮ್ ಸಾರಂಗ್ ಸಂಗೀತ ಸಂಯೋಜಿಸಿದ್ದು, ಮಂಜುನಾಥ್ ಅವರ ಛಾಯಾಗ್ರಹಣವಿದೆ ಹಾಗೂ ಅನಿಲ್ ಅವರ ಸಂಕಲನವಿದೆ. ತಾರಾಂಗಣದಲ್ಲಿ ಅನಿಲ್, ಶಾಶ್ವತ್ ಶೆಟ್ಟಿ, ಸೋನಿಯಾ, ದಿನಕರ್ ಶೆಟ್ಟಿ ಜನನಿ ಹಾಗೂ ಗುಲ್ವಾಡಿ ಫ್ರೆಂಡ್ಸ್ ಮತ್ತು ಹಲವಾರು ಯುವ ಪ್ರತಿಭೆಗಳು ಅಭಿನಯಿಸಿದ್ದಾರೆ.

ಟ್ರೈಲರ್ ಕೆಳಗಿನ ಯೂಟ್ಯೂಬ್ ಚಾನೆಲ್’ನಲ್ಲಿ ಬಿಡುಗಡೆಯಾಗಲಿದೆ.
ಈ ಕೂಡಲೇ ಚಿತ್ರದ ಎಲ್ಲಾ ಅಪ್ಡೇಟ್ಸ್’ಗಳಿಗಾಗಿ ಈ ಯೂಟ್ಯೂಬ್ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಚಿತ್ರತಂಡವನ್ನು ಬೆಂಬಲಿಸಿ.

MyByndoor

Leave a Reply

Your email address will not be published.

error: Mere Bai..Copy Matt Kar..