ಚೆಂಡು ವಿರೂಪ ಪ್ರಕರಣ: ಸ್ಮಿತ್ ಬದಲಿಗೆ ರಹಾನೆ ರಾಜಸ್ತಾನ ರಾಯಲ್ಸ್ ಮುನ್ನಡೆಸುವ ಸಾಧ್ಯತೆ
ಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಬಾಲ್ ವಿರೂಪಗೊಳಿಸಿದ ಆರೋಪಕ್ಕೆ ತುತ್ತಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಆಡುವ ಕುರಿತು ಅನುಮಾನಗಳು ಶುರವಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಸ್ಟೀವ್ ಸ್ಮಿತ್ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದೆ. ಸ್ಮಿತ್ ಗೆ ಒಂದು ಪಂದ್ಯ ನಿಷೇಧ ಹೇರಿದ್ದು ಈ ಹಿನ್ನೆಲೆಯಲ್ಲಿ ಸ್ಟೀಟ್ ಸ್ಮಿತ್ ಆರೋಪ ಮುಕ್ತರಾದ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ರಾಜಸ್ತಾನ ರಾಯಲ್ಸ್ ಕರಾರಿಗೆ ಮುಂದಾಗಲಿದೆ.
ಆದಾಗ್ಯೂ, ಬಿಸಿಸಿಐನ ಒಂದು ಚಿಂತಕರು ಸ್ಟೀವ್ ಸ್ಮಿತ್ ರಾಜಸ್ತಾನ ರಾಯಲ್ಸ್ ತಂಡದ ನಾಯಕ ಸ್ಥಾನವನ್ನು ಸ್ವತಃ ತೊರೆಯಬೇಕೆಂದು ನಿರ್ಧರಿಸಿದೆ. ಇನ್ನು ಇದಕ್ಕೆ ರಾಜಸ್ತಾನ ಸ್ಟೀವ್ ಸ್ಮಿತ್ ಬದಲಿಗೆ ರಹಾನೆಯನ್ನು ನಾಯಕನನ್ನಾಗಿ ಮಾಡಲು ಸಿದ್ಧವಿರುವುದಾಗಿ ಹೇಳಿದೆ.
ರಾಜಸ್ತಾನ ರಾಯಲ್ಸ್ ಗೆ ಸ್ಟೀವ್ ಸ್ಮಿತ್ ನಾಯಕತ್ವ ವಹಿಸಬೇಕಿತ್ತು. ಬಾಲ್ ಟ್ಯಾಂಪರಿಂಗ್ ವಿವಾದ ಇದೀಗ ಅವರ ಕ್ರಿಕೆಟ್ ಬದುಕಿಗೆ ಕೊಡಲಿ ಪೆಟ್ಟು ನೀಡಲಿದೆ.
MyByndoor

Leave a Reply

Your email address will not be published.

error: Mere Bai..Copy Matt Kar..