IPL ಅಭಿಮಾನಿಗಳಿಗೆ ಸಿಹಿ ಸುದ್ದಿ… ಜಿಯೋದಿಂದ ಕೇವಲ 2.50ರೂ 1 ಜಿಬಿ 4ಜಿ ಡಾಟಾ!!!

ಹೌದು, ಕೇವಲ 251 ರೂ.ಗೆ ಜಿಯೋ 102 ಜಿಬಿ ಡಾಟಾ ಪ್ಲಾನ್‌ನನ್ನು ಘೋಷಿಸಿದೆ. ಈ ಡಾಟಾ ಪ್ಲಾನ್‌ ರಿಚಾರ್ಜ್‌ ಮಾಡಿಸಿದ ಮುಂದಿನ 51 ದಿನಗಳವರೆಗೆ ಪ್ರತಿದಿನ 2 ಜಿಬಿ ಡಾಟಾ ನೀಡಲಿದೆ ಜಿಯೋ.

ಐಪಿಎಲ್‌ ಪಂದ್ಯ ಏಪ್ರಿಲ್‌ 7ರಿಂದ ಆರಂಭವಾಗಿ ಮೇ.27ಕ್ಕೆ ಕೊನೆಗೊಳ್ಳಲಿದೆ. ಈ ಉದ್ದೇಶದಿಂದ ಐಪಿಎಲ್‌ ಕ್ರಿಕೆಟ್‌ ಅಭಿಮಾನಿಗಳಿಗೆ ಅನುಕೂಲವಾಗಲೆಂದೇ ಜಿಯೋ 51 ದಿನಗಳ ಪ್ಲಾನ್‌ನ್ನು ಘೋಷಿಸಿದೆ. ಈ ಪ್ಲಾನ್‌ನಿಂದ ಜಿಯೋ ಗ್ರಾಹಕರಿಗೆ ಕೇವಲ 2.50 ರೂ.ಗೆ 1ಜಿಬಿ 4ಜಿ ಸ್ಪಿಡ್‌ ಡಾಟಾ ಕೈಗೆಟುಕಲಿದೆ.

251 ರೂ.ಗಳ ರಿಚಾರ್ಜ್‌ ಪ್ಯಾಕ್‌ ಕೇವಲ ಐಪಿಎಲ್‌ ನೋಡುಗರಿಗೆ ಮಾತ್ರ. ಐಪಿಎಲ್‌ ಬಿಟ್ಟು ಬೇರೆ ಯಾವುದೇ ಕ್ರಿಕೆಟ್‌ ಪಂದ್ಯಗಳಾಗಲಿ ಮತ್ತು ವಿಡಿಯೋ ಲೈವ್‌ ಸ್ಟ್ರೀಮಿಂಗ್‌ಗಳಾಗಲಿ, ಡೌನ್‌ಲೋಡ್‌ಗಳಾಗಲಿ ಆಗುವುದಿಲ್ಲ. ಆದ್ರೆ ಈ ಡಾಟಾ ಪ್ಯಾಕ್‌ನ್ನು ಜೀಯೋ ಲೈವ್‌ ಕ್ರಿಕೆಟ್‌ ಗೇಮ್‌ಗೆ ಬಳಸಿಕೊಳ್ಳಬಹುದಾಗಿದೆ. 

MyByndoor News

Leave a Reply

Your email address will not be published.

error: Mere Bai..Copy Matt Kar..