ಕಿರಿಮುಂಜೇಶ್ವರ ಶುಭದಾ ಆಂಗ್ಲಮಾದ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ.

“ಗಿಡಗಳಿಲ್ಲದೆ ಮನುಷ್ಯ ಜೀವನ ಅಪೂರ್ಣ,ಮಾನವನ ಅತಿಆಶೆಯಿಂದ ಕಾಡು ನಾಶವಾಗುತ್ತಿದೆ, ಪ್ರಾಣಿಗಳು ನಾಡಿನತ್ತ ಹೆಜ್ಜೆ ಇಡುತ್ತಿವೆ” ಡಾ. ಎನ್.ಕೆ.ಬಿಲ್ಲವ.
ಯಾವುದೇ ವ್ಯಕ್ತಿಯ ಪರಿಪೂರ್ಣತೆ ಆಗುವುದು ಪರಿಸರ ಹಾಗೂ ಗಿಡಗಳಿಂದ, ಗಿಡಗಳಿಲ್ಲದೆ ಮನುಷ್ಯನ ಜೀವನ ಸಂಪೂರ್ಣ ಕಾಣುವುದಿಲ್ಲ ಎಂದು ಶುಭದಾ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ.ಎನ್.ಕೆ.ಬಿಲ್ಲವ ಹೇಳಿದರು.
ಅವರು ಶುಭದಾ ಆಂಗ್ಲಮಾದ್ಯಮ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹುಟ್ಟಿನಿಂದ ಸಾವಿನ ತನಕ ವೃಕ್ಷಗಳು ಬೇಕು ಆದರೆ ಮನುಷ್ಯನ ಅತಿ ಆಸೆಯಿಂದಾಗಿ ಕಾಡು ನಾಶವಾಗುತ್ತಿದೆ ಇದರಿಂದ ಪ್ರಾಣಿಗಳು ನಾಡಿನತ್ತ ಹೆಜ್ಜೆಹಾಕುತ್ತಿವೆ ಎಂದರು.
ಹಿರಿಯ ಶಿಕ್ಷಕರಾದ ಶ್ರೀ ಯ.ಎಚ್ಚ್ ರಾಜಾರಾಮ ಭಟ್ಟ ಅವರು ಪರಿಸರ ರಕ್ಷಣೆಯ ಮಹತ್ವವನ್ನು ಉದಾಹರಣೆಯ ಮೂಲಕ ತಿಳಿಸಿದರು. ಮುಖ್ಯ ಶಿಕ್ಷಕರಾದ ಶ್ರೀ ರವಿದಾಸ ಶಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಶಾಲಾ ಸಂಯೋಜಕಿ ಶ್ರೀಮತಿ ಗೀತಾದೇವಿ ಅಡಿಗ, ಶಾಲಾನಿರ್ದೇಶಕ ಶ್ರೀ ಕೆ.ಪುಂಡಲೀಕ ನಾಯಕ್, ಸಂಚಾಲಕ ಶ್ರೀ ಶಂಕರ ಪೂಜಾರಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಕ್ಕಳು ಉತ್ತಮ ಪ್ರಾತ್ಯಕ್ಷಿಕೆಯ ಮೂಲಕ ಪರಿಸರ ರಕ್ಷಣೆಯ ಅರಿವು ಮೂಡಿಸಿದರು.
ಶ್ರೀಮತಿ ಅಶ್ವಿನಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಗಿಡಗಳನ್ನು ವಿತರಿಸಲಾಯಿತು.

MyByndoor

Leave a Reply

Your email address will not be published.

error: Mere Bai..Copy Matt Kar..