ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ

ಕಿರಿಮಂಜೇಶ್ವರ, ತಾ 06.10.2018:- 2018- 19 ನೇ ಸಾಲಿನ ಬೈಂದೂರು ವಲಯ ಮಟ್ಟದ ಇಲಾಖಾ ಕ್ರೀಡಾ ಕೂಟದಲ್ಲಿ ಪ್ರಥಮ ಸ್ಥಾನಿಯಾಗಿ ವಿಜೇತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಪಂಚಾಯತ್ ಕೊಡಮಾಡುವ ಸಮವಸ್ತ್ರವನ್ನು
ಶುಭದಾ ಆಂಗ್ಲ ಮಾಧ್ಯಮ ಶಾಲೆ
ಕಿರಿಮಂಜೇಶ್ವರದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ,ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಶ್ಯಾಮಲಾ ಕುಂದರ್ ಶ್ರೀ ಮಹೇಂದ್ರ ಪೂಜಾರಿ, ಶುಭದಾ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರವಿದಾಸ್ ಶೆಟ್ಟಿ,
ಶಾಲೆಯ ನಿರ್ದೇಶಕರಾದ ಶ್ರೀ ಕೆ.ಪುಂಡಲೀಕ ನಾಯಕ್,ಸಂಚಾಲಕ ಶ್ರೀ ಶಂಕರ ಪೂಜಾರಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಶ್ರೀ ಪ್ರಭಾಕರ ಎಸ್, ವಲಯ ದೈಹಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಮಟ್ಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶುಭಕೋರಿದರು.

MyByndoor News
error: Mere Bai..Copy Matt Kar..