ವಜ್ರದುಂಬಿ ಗೆಳೆಯರ ಬಳಗ ಬಿಜುರು ಇವರ ವತಿಯಿಂದ ಉಚಿತ ಚರ್ಮರೋಗ ತಪಾಸಣೆ ಹಾಗೂ ಔಷಧ ವಿತರಣೆ ಕಾರ್ಯಕ್ರಮ ನಡೆಯಿತು.

ಬೈಂದೂರು: ದಿನಾಂಕ 7-10-2018  ಆದಿತ್ಯವಾರ ದಂದು  ಉಪ್ಪಂದ ಸಭಾಭವನದ ಲ್ಲಿ
ವಜ್ರದುಂಬಿ ಗೆಳೆಯರ ಬಳಗ ಬಿಜೂರು ಇವರ ಆಶ್ರಯದಲ್ಲಿ ಡಾ/ಸತೀಶ್ ಪೈ ಚರ್ಮರೋಗ ತಜ್ಞರು ಡಾ/ಸುದೀರ್ ನಾಯಕ್ ಚರ್ಮರೋಗ ತಜ್ಞರು KMC ಮಣಿಪಾಲ ನುರಿತ ತಜ್ಞ ವೈದ್ಯರ ತಂಡದಿಂದ ಸಾರ್ವಜನಿಕರ ಒತ್ತಾಯದ ಮೇರೆಗೆ ದ್ವಿತೀಯ ಬಾರಿಗೆ ಉಚಿತ ಚರ್ಮರೋಗ ತಪಾಸಣಾ ಶಿಬಿರ ಉಪ್ಪುಂದ ಶ್ರೀ. ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಭಾನುವಾರ ನಡೆಯಿತು.ಉಡುಪಿ ಜಿಲ್ಲಾ ಕೆಡಿಪಿ ಸದಸ್ಯರಾದ ರಾಜು ಪೂಜಾರಿ ಉದ್ಘಾಟಿಸಿದರು.
ವಜ್ರದುಂಬಿ ಗೆಳೆಯರ ಸಂಘದ ಅಧ್ಯಕ್ಷ ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರಾದ ಜಗದೀಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಸುಭ್ರಮಣ್ಯ ಗಾಣಿಗ ಅಧ್ಯಾಪಕರು ಕಾರ್ಯಕ್ರಮ ನಿರ್ವಹಿಸಿದರು. ನಂತರ 300ಕ್ಕೂ ಹೆಚ್ಚು ಮಂದಿ ಉಚಿತ ಚಿಕಿತ್ಸಾ ಸೌಲಭ್ಯ ಪಡೆದರು.

MyByndoor News

Leave a Reply

Your email address will not be published.

error: Mere Bai..Copy Matt Kar..