ಪಂತ್ ಭವಿಷ್ಯದ ಗಿಲ್ಲಿ: ಗವಾಸ್ಕರ್

ಹೈದರಾಬಾದ್: ಉದಯೋನ್ಮುಖ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರ ಬ್ಯಾಟಿಂಗ್‌ನಿಂದ ಸಾಕಷ್ಟು ಪ್ರಭಾವಿತರಾಗಿರುವ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹಾಡಿ ಹೊಗಳಿದ್ದಾರೆ.

ವೆಸ್ಟ್‌ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲೂ ಪಂತ್ ಆಕರ್ಷಕ ಅರ್ಧಶತಕ ಬಾರಿಸಿದ್ದರು. ಈ ಮೂಲಕ ಸತತ ಮೂರನೇ ಫಿಫ್ಟಿ ಸಾಧನೆ ಮಾಡಿದ್ದರು.

ಗಾಯಾಳು ವೃದ್ಧಿಮಾನ್ ಸಹಾ ಸ್ಥಾನವನ್ನು ಸಮರ್ಥವಾಗಿಯೇ ತುಂಬಿಕೊಂಡಿರುವ ಪಂತ್, ಭಾರತದ ಯುವ ಸೆನ್ಸೇಷನಲ್ ಎನಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿಕೆಟ್ ಕೀಪರ್ ಮಾಜಿ ದೈತ್ಯ ಆ್ಯಡಂ ಗಿಲ್‌ಕ್ರಿಸ್ಟ್ ಹೋಲುವ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯು ಪಂತ್ ಅವರನ್ನು ವಿಭಿನ್ನವಾಗಿಸುತ್ತದೆ. ಇದನ್ನೇ ಗವಾಸ್ಕರ್ ವಿವರಿಸಿದ್ದಾರೆ.

ಮಧ್ಯಮ ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟ್ ಬೀಸುವ ಗಿಲ್ಲಿ ಆಸೀಸ್ ತಂಡವನ್ನು 300-400ರ ಗಡಿ ತಲುಪಿಸಲು ನೆರಾವಾಗುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ನಿರ್ಣಾಯಕ. ಗಿಲ್ಲಿ ಅವರ ಉಪಯುಕ್ತ ಬ್ಯಾಟಿಂಗ್‌ನಿಂದ ಆಸೀಸ್ ಅನೇಕ ಪಂದ್ಯಗಳನ್ನು ಗೆದ್ದಿದೆ. ಇದೀಗ ಪಂತ್ ಸಹ ಟೀಮ್ ಇಂಡಿಯಾಕ್ಕಾಗಿ ಇದಕ್ಕೆ ಸಮಾನವಾದ ಕೆಲಸವನ್ನು ನಿಭಾಯಿಸಬಲ್ಲರು ಎಂದು ಗವಾಸ್ಕರ್ ಹೇಳಿದ್ದಾರೆ.

ಪಂತ್ ಹಾಗೂ ಪೃಥ್ವಿ ಶಾ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಗವಾಸ್ಕರ್ ಕೊಂಡಾಡಿದ್ದಾರೆ. ಇಬ್ಬರು ಯುವ ಆಟಗಾರರು ಈ ರೀತಿಯ ಬ್ಯಾಟಿಂಗ್ ಆಡುವುದು ನಿಜಕ್ಕೂ ಅದ್ಭುತ ಎಂದಿದ್ದಾರೆ.

ಪಂತ್‌ಗೆ ಎಲ್ಲ ರೀತಿಯ ಶಾಟ್ ಆಯ್ಕೆಗಳು ಗೊತ್ತು. ತಮ್ಮ ಬ್ಯಾಟಿಂಗ್‌ನ್ನು ಸಂಭ್ರಮಿಸುವ ರೀತಿಯಲ್ಲಿ ಆಡಿದ್ದಾರೆ. ರಹಾನೆ ಜೊತೆಗಿನ ಪಂತ್ ಇನ್ನಿಂಗ್ಸ್ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವೆನಿಸಿತು ಎಂದಿದ್ದಾರೆ

MyByndoor

Leave a Reply

Your email address will not be published.

error: Mere Bai..Copy Matt Kar..