ಧೋನಿ ಪುತ್ರಿ ಝೀವಾಳ ಪ್ಲಾಂಕ್‍ಗೆ ನೆಟ್ಟಿಗರು ಫಿದಾ -ವಿಡಿಯೋ

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪುತ್ರಿ ಝಿವಾ ಈಗಾಗಲೇ ವಿಶ್ವ ಕ್ರೀಡಾ ಅಭಿಮಾನಿಗಳ ಮನಸೆಳೆದಿದ್ದು, ಜೀವಾಳೊಂದಿಗೆ ಧೋನಿ ಕಳೆಯುವ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಖುಷಿ ಪಡುತ್ತಾರೆ. ಸದ್ಯ ಝೀವಾ ಪ್ಲಾಕ್ ಮಾಡುತ್ತಿರುವ ವಿಡಿಯೋವನ್ನು ಸಾಕ್ಷಿ ಧೋನಿ ಶೇರ್ ಮಾಡಿದ್ದಾರೆ.

ಹೌದು, ಸಾಕ್ಷಿ ಧೋನಿ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಮುದ್ದಾಗಿ ಕಾಣುವ ಝೀವಾ ವ್ಯಾಯಾಮ ಮಾಡುವುದನ್ನು ಕಾಣಬಹುದಾಗಿದೆ. ಲೀಲಾಜಾಲವಾಗಿ ಪ್ಲಾಂಕ್ ಮಾಡುತ್ತಿರುವ ಝೀವಾ, ಎಷ್ಟು ಸಮಯ ಕಾಲ ಬ್ಯಾಲೆನ್ಸ್ ಮಾಡಿದ್ದಾಳೆ ನೋಡಿ. ನಾನು ಫೋನ್ ತೆಗೆದುಕೊಂಡು ಫೋಟೋ ಸೆರೆಹಿಡಿಯುವವರೆಗೂ ಹಾಗೇ ಇದ್ದಳು ಎಂದು ಬರೆದುಕೊಂಡಿದ್ದಾರೆ.

ಝೀವಾ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಫಾಲೋ ಮಾಡುತ್ತಿದ್ದು, ಈ ಹಿಂದೆ ಝೀವಾ ಮಾಡಿದ್ದ ಡಾನ್ಸ್ ವಿಡಿಯೋ ಸಖತ್ ವೈರಲ್ ಆಗಿತ್ತು. ಸದ್ಯ ಝೀವಾ ಪ್ಲಾಂಕ್ ಮಾಡುವ ರೀತಿ ನೋಡಿ ಹಲವರು ಫಿದಾ ಆಗಿದ್ದು, ತಮ್ಮದೇ ಅಭಿಪ್ರಾಯ ತಿಳಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಇದುವರೆಗೂ ವಿಡಿಯೋವನ್ನ 4 ಲಕ್ಷಕ್ಕೂ ಅಧಿಕ ಬಾರಿ ವಿಕ್ಷೀಸಿದ್ದಾರೆ.

MyByndoor

Leave a Reply

Your email address will not be published.

error: Mere Bai..Copy Matt Kar..