ಕಥೊಲಿಕ್ ಸ್ತ್ರೀ ಸಂಘಟನೆಯ ನೇತ್ರತ್ವದಲ್ಲಿ,ಕುಂದಾಪುರ, ಬೈಂದೂರು ‘ಭಾವನಾ’ ಮಹಿಳಾ ಒಕ್ಕೂಟ ಉದ್ಘಾಟನೆ

ಮಹಿಳೆಯರು ತಮ್ಮ ಸರ್ವಾಂಗೀಣ ಅಭಿವ್ರದ್ದಿ ಹೊಂದಲು, ಸ್ವಸಹಾಯ ಪಂಗಡಗಳಲ್ಲಿ ಸೇರಿಕೊಂಡು, ಅದರ ಲಾಭವನ್ನು ಪಡೆದುಕೊಂಡು ಕಥೊಲಿಕ್ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ|ಬಿಶಪ್ ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು.

ಅವರು ಕಥೊಲಿಕ್ ಸ್ತ್ರೀ ಸಂಘಟನೆ ವಲಯ ಮಟ್ಟದ ಸಂಘಟನೇಯ ಮುಂದಾಳತ್ವದಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕುಗಳಲ್ಲಿನ ಸುಮಾರು 11 ಚರ್ಚುಗಳ ಮಹಿಳಾ ಸ್ವಹಾಯ ಎಲ್ಲಾ ಪಂಗಡಗಳನ್ನು ಒಟ್ಟುಗೂಡಿಸಿ ಭಾವನಾ ಮಹಿಳಾ ಒಕ್ಕೂಟವನ್ನು ಕುಂದಾಪುರದ ಸಂತ ಮೇರಿಸ್ ಪಿ.ಯು.ಕಾಲೇಜ್ ಸಭಾಂಗಣದಲ್ಲಿ 500 ಕ್ಕೂ ಹೆಚ್ಚು ಮಹಿಳೆಯರಿದ್ದ ಸಭೆಯಲ್ಲಿ ಉದ್ಘಾಟಿಸಿ ಮಾತನಾಡುತಿದ್ದರು. ‘ಮಹಿಳೆ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಅಭಿವ್ರದ್ದಿಯನ್ನು ಪಡೆದುಕೊಳ್ಳಬೇಕು. ಅಬಲೆಯಂತ ಮಹಿಳೆಗೆ ಮಹಿಳೆಯರೆ, ಸ್ವಸಹಾಯ ಪಂಗಡಗಳ ಮೂಲಕ ಸಬಲೇಯನ್ನಾಗಿ ಮಾಡಬೇಕು, ಕೇವಲ ಅಮ್ಮನಾಗಿ, ಗಂಡನಾಗಿ ಮಹಿಳೆ ಪಾತ್ರವಹಿಸದೆ ಮನೆಯ, ಚರ್ಚಿನ ಪರಿಧಿ ದಾಟಿ ಸಬಲೆಯಾಗಬೇಕು’ ಎಂದು ಅವರು ಕರೆಯಿತ್ತರು.
ಕಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಾತ್ಮಿಕ ನಿರ್ದೇಶಕ ವಂ|ಫಾ|ರೆಜಿನಾಲ್ಡ್ ಪಿಂಟೊ ಪ್ರಸ್ತಾವಿಕ ಭಾಷಣ ಮಾಡಿ ‘ಮಹಿಳೆ ಸ್ವಾಲಂಭಿಯಾಗಿ ಬೆಳೆಯಬೇಕೆಂಬ ಉದ್ದೇಶದಿಂದ ಮಹಿಳಾ ಒಕ್ಕೂಟದ ಮುಖ್ಯ ಗುರಿ, ಇಲ್ಲಿ ಮಹಿಳೆಯರ ಅಭ್ಯುದಯಕ್ಕಾಗಿ ಹಲವು ಉದ್ದೇಶಗಳಿವೆಯೆಂದು ವಿವರಣೆಯನ್ನು ಅವರು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಲಯ ಪ್ರಧಾನ ಅತೀ ವಂ|ಫಾ|ಸ್ಟ್ಯಾನಿ ತಾವ್ರೊ ‘ಒಳ್ಳೆಯ ಉದ್ದೇಶ ಇಟ್ಟುಕೊಂಡು ಈ ಒಕ್ಕೂಟವನ್ನು ರಚಿಸಿಸಲಾಗಿದೆ, ಇದು ಸಫಲತೆಯನ್ನು ಪಡೆಯ ಬೇಕಾದರೆ, ಈ ಒಕ್ಕೂಟದಲ್ಲಿ ಸೇರಿಕೊಂಡು, ಈಗಿನ ಅಭಿವ್ರದ್ದಿಯನ್ನು ಮಹಿಳೆ ತಿಳಿದುಕೊಳ್ಳ ಬೇಕು, ಕೇವಲ ಹೆಂಡತಿ, ಅಮ್ಮನ್ನಾಗಿ ನಿಮಗೇನೂ ತಿಳಿಯುದಿಲವೆಂಬ್ಬ ನಿಮ್ಮ ಕೆಲವರ ಮೇಲಿದ್ದ ಆರೋಪವನ್ನು ನೀವು ಮೆಟ್ಟಿ ನಿಂತು ಸುಳ್ಳು ಮಾಡಬೇಕು’ ಎಂದು ಅವರು ಸಂದೇಶ ನೀಡಿದರು.
ಕೇಂದ್ರಿಯ ಕಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಜಾನೆಟ್ ಬಾರ್ಬೊಜಾ, ಸಚೇತಕಿ ಸಿಸ್ಟರ್ ಜಾನೆಟ್, ವಲಯ ಸಚೇತಕಿ ಸಿಸ್ಟರ್ ಜೂಲಿಯನ್ ಎ.ಸಿ. ಶುಭ ಕೋರಿದರು. ವೇದಿಕೆಯಲ್ಲಿ 11 ಚರ್ಚ ಘಟಕಗಳ ಅಧ್ಯಕ್ಷೆಯರಾದ ಕುಂದಾಪುರ ಶಾಂತಿರಾಣಿ ಬಾರೆಟ್ಟೊ, ಪಿಯುಸ್ ನಗರ್ ಏವ್ಲಿನ್ ಮೊಂತೇರೊ, ಕೋಟಾ ಎಡ್ನೋರಾ ಡಿಸೋಜಾ, ಕೋಟೆಶ್ವರ ಡಾಯಾನಾ ಸೆರಾವೊ, ಬೈಂದೂರು ಜಾನೆಟ್ ನಜರೆತ್, ಪಡುಕೋಣೆ ಶಾಂತಿ ಸುವಾರಿಸ್, ತ್ರಾಸಿ ಕ್ಯಾತ್ರಿನ್ ಡಾಯಾಸ್, ಗಂಗೊಳ್ಳಿ ಗ್ಲೋರಿಯಾ ಫೆರ್ನಾಂಡಿಸ್, ಕಂಡ್ಲರು ಮೀರಾ ಡಿಸೋಜಾ, ತಲ್ಲೂರು ಜಮ್ಮಾ ಡಿಸೋಜಾ, ಬಸ್ರೂರು ಡೇಲಿಯಾ ಡಿಸೋಜಾ, ಹಾಜರಿದ್ದರು. ಹಾಗೇ ಉಡುಪಿ ಧರ್ಮಪ್ರಾಂತ್ಯದ ನಾಲ್ಕು ವಲಯ ಅಧ್ಯಕ್ಷೆಯರಾದ ಕಾರ್ಕಳದ ವಾಲೇರಿಯಾ ಕುಟಿನ್ಹೊ, ಕಲ್ಯಾಣಪುರದ ಜ್ಯೋತಿ ಲುವಿಸ್, ಶಿರ್ವಾದ ಟ್ರೀಜಾ ಮಚಾದೊ ಮತ್ತು ಉಡುಪಿಯ ಹೆಝಿಲ್ ಡಿಲೀಮಾ ಉಪಸ್ಥಿತರಿದ್ದರು. ಕುಂದಾಪುರ, ಬೈಂದೂರು, ಗಂಗೊಳ್ಳಿ, ಕೋಟ, ಪಿಯುಸ್ ನಗರ್, ಪಡುಕೋಣೆ, ಕೊಟೇಶ್ವರ, ಬಸ್ರೂರು, ತಲ್ಲೂರು, ಕಂಡ್ಲೂರು ಚರ್ಚ್ ಘಟಕಗಳಿಂದ ಸಣ್ಣ ನಾಟಕ, ನ್ರತ್ಯ ಮತ್ತು ಗೀತೆಗಳ ಮೂಲಕ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿ ಮನರಂಜಿಸಿದರು. ಕುಂದಾಪುರ ವಲಯ ಅಧ್ಯಕ್ಷೆ ಪರ್ಮೀಳಾ ಡೆಸಾ ಸ್ವಾಗತಿಸಿದರು, ಕಾರ್ಯದರ್ಶಿ ಸುನೀತಾ ಮೆಂಡೊನ್ಸಾ ವಂದಿಸಿದರು, ಸುನೀತಾ ಡಿಮೆಲ್ಲೊ ಮತ್ತು ಸಾಹಿರಾ ಕ್ವಾಡರ್ಸ್ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು.

MyByndoor
error: Mere Bai..Copy Matt Kar..