ಮೋದಿ ಸರ್ಕಾರ. ರೈತರನ್ನು ನಿರ್ಲಕ್ಷ್ಯ ಮಾಡಿದೆ: ಸಿದ್ದರಾಮಯ್ಯ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ಜೋಶ್‍ನಲ್ಲಿಯೇ ಪ್ರಚಾರ ಮಾಡಿದ್ದಾರೆ. ತಮ್ಮ ಹಳೇ ಸ್ಟೈಲ್‍ನ ಮಾತುಗಾರಿಕೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕಾಲೆಳೆದರು.

ಬಿ.ಎಸ್.ಯಡಿಯೂರಪ್ಪ ಅವರ ಮಗನಿಗೆ ವೋಟ್ ಹಾಕಬೇಡಿ. ಬಿಜೆಪಿಯವರು ಜನರನ್ನು ಪ್ರಚೋದಿಸಿ ದಾರಿ ತಪ್ಪಿಸುತ್ತಿದ್ದಾರೆ. ಹಿಂದುತ್ವ ಹೊಟ್ಟೆ ತುಂಬಿಸುವುದಿಲಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಹಸಿರು ಶಾಲು ಹಾಕಿಕೊಂಡು ಡೋಂಗಿತನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಆಗಬೇಕು ಅಂತಾ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಖ್ಯಮಂತ್ರಿ ಸ್ಥಾನಕ್ಕೆ ಓಡಾಡಿದರು. ಕೊನೆಗೆ ಎರಡೂವರೆ ದಿನ ಸಿಎಂ ಆದರು ಎಂದು ವ್ಯಂಗ್ಯವಾಡಿದರು.

ತಾವು ರಾಜೀನಾಮೆ ನೀಡಿದ ಕ್ಷೇತ್ರದಿಂದ ಪುತ್ರನನ್ನು ಕಣಕ್ಕೆ ಇಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳು ತಮಗೆ ತಿಳಿದಂತೆ ಮಾಡುವುದು ಸರಿಯಲ್ಲ. ಆಯ್ಕೆ ಮಾಡಿದ ಜನರನ್ನು ಕೇಳಿ ರಾಜೀನಾಮೆ ನೀಡಬೇಕು ಎಂದು ಕುಟುಕಿದ ಮಾಜಿ ಸಿಎಂ, ಮೂರು ಉಪಚುನಾವಣೆಗಳು ಅನಗತ್ಯವಾಗಿ ಬಂದಿವೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗುವ ಆಸೆಯಿಂದ ಹೀಗಾಯಿತು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ರಾಜ್ಯ ನಾಯಕರು ಬಾಯಿಯನ್ನೇ ಬಿಡಲ್ಲ. ಸಾಲಮನ್ನಾ ಮಾಡದಕ್ಕೆ ಮೋದಿ ಅವರಿಗೆ ಯಾವ ರೋಗ ಬಂದಿದೆ ಎಂದು ಪ್ರಶ್ನಿಸಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ ಅವರು, ಯಾವಾನೋ ಅವನು ಶ್ರೀನಿವಾಸ ಶೆಟ್ಟಿ? ಅವನ ಮುಖಾನೇ ನಾನು ನೋಡಿಲ್ಲ ಅಂತ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಬರಿಗೆ ಏಕವಚನದಲ್ಲಿಯೇ ಮಾಜಿ ಸಿಎಂ ಬೈದರು.

ಪ್ರಧಾನಿ ಮೋದಿ ಇಮಿಟೇಟ್ ಮಾಡಿದ ಸಿದ್ದರಾಮಯ್ಯ, ಅಚ್ಚೇದಿನ್ ಕಬೀ ನಹೀ ಆಯೇಗಾ. ಹೇ ಮಿಸ್ಟರ್ ಮೋದಿ. ಇಲ್ಲಿ ಕೇಳಪ್ಪಾ ನೀನು. ಚೌಕಿದಾರ ಅಂತ ಭಾಷಣ ಮಾಡಿದ್ದೇ ಮಾಡಿದ್ದು. ತಿನ್ನಲ್ಲ ತಿನ್ನಕ್ಕೆ ಬಿಡಲ್ಲ ಅಂದಿದ್ಯಲ್ಲಪ್ಪಾ ಅಂತ ಏಕವಚನದಲ್ಲೇ ಮಾತಿನ ಚಾಟಿ ಬೀಸಿದರು.

ಮಿಸ್ಟರ್ ಮೋದಿ. ರಫೆಲ್ ಹಗರಣ ದೇಶದ ಅತೀ ದೊಡ್ಡ ಹಗರಣ. 40 ಸಾವಿರ ಕೋಟಿ ರೂ. ಎಲ್ಲಿ ಹೋಯಿತು? ಏನಾಯ್ತಪ್ಪ ನಿಮ್ಮ ಬಣ್ಣ ಬದಲಾಯ್ತಲ್ಲ ಮೋದಿ ಅಂತ ನಾಟಕೀಯವಾಗಿ ಸಿದ್ದರಾಮಯ್ಯ ಭಾಷಣ ಮಾಡಿದರು. ಬಿ.ಎಸ್.ಯಡಿಯೂರಪ್ಪ ಹಾನೆಸ್ಟಾ? ಅವರ ಜೈಲಿಗೆ ಹೋದ ಗಿರಾಕಿ ಎಂದು ಮಾತಲ್ಲೇ ಕುಟುಕಿದರು.

MyByndoor
error: Mere Bai..Copy Matt Kar..