ಬೈಂದೂರು ಕಾಂಗ್ರೆಸ್  ಕಚೇರಿಯಲ್ಲಿ ದಿ: ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.

ದಿನಾಂಕ 31-10-2018 ರಂದು ಬೈಂದೂರು ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನ ಮಂತ್ರಿ, ಉಕ್ಕಿನ ಮಹಿಳೆ ದಿ: ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು, ಈ ಸಂಧರ್ಭದಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿಗಳಾದ ಮುರುಳಿ ಶೆಟ್ಟಿ, ಎಂ.ಎಸ್ .ಮಹಮ್ಮದ್ , ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ, ನಾಗರಾಜ ಗಾಣಿಗ, ಜಗದೀಶ ಪೂಜಾರಿ ಹಾಗೂ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

1. ಇಂದಿರಾ ಗಾಂಧಿ ಯವರು ಆಡಳಿತ ನಡೆಸಿದ 17 ವರ್ಷಗಳ ಕಾಲದಲ್ಲಿ ಬಡ ರಾಷ್ಟವನ್ನು ಆಹಾರದ ಉತ್ಪಾದನೆಯಲ್ಲಿ ಸ್ವಾವಲಂಭಿಯನ್ನಾಗಿ ಮಾಡಿದ್ದರು.

2. ತಮ್ಮ ದೃಢ ನಿರ್ಧಾರದಿಂದ ಶತೃ ದೇಶವಾದ ಪಾಕಿಸ್ತಾನದ ಬೆನ್ನು ಮುರಿದು ಎರಡು ತುಂಡಾಗಿ ಮಾಡಿ ವೀರ ಮಹಿಳೆಯಾಗಿ ಚಿಮ್ಮಿದರು.

3. ರಾಷ್ಟ್ರವನ್ನು ಉತ್ತುಂಗಕ್ಕೇರಿಸಲು ಅಣು ಸ್ಫೋಟ ಮಾಡಿ ವಿಶ್ವದಲ್ಲಿ ಭಾರತದ ಗೌರವವನ್ನು ಎತ್ತರಕ್ಕೆ ಕೊಂಡೊಯ್ದರು.

4. ಪಂಜಾಬಿನಲ್ಲಿ ಉಗ್ರರ ಹಾವಳಿಯನ್ನು ಮೂಲೋತ್ಪಾಟನೆ ಮಾಡಿ ತಾನು ಒಬ್ಬ ಉಕ್ಕಿನ ಮಹಿಳೆಯೆಂದು ಮನದಟ್ಟು ಮಾಡಿಸಿದರು.

5. ಅಮೆರಿಕದ ಹೆನ್ರಿ ಕಿಸಿಂಜರ್ ಕೂಡ ಹಾಡಿ ಹೊಗಳಿದ ಇಂದಿರಾ ಗಾಂಧಿಯವರು ಗುಂಡಿನೇಟಿಗೆ ಬಲಿಯಾಗಿ ತಮ್ಮ ರಕ್ತವನ್ನು ಬಲಿದಾನ ಮಾಡಿ ಅಮರರಾದರು.

MyByndoor
error: Mere Bai..Copy Matt Kar..