ಎಂ.ಬಿ. ಎಜುಕೇಷನ್ ಟ್ರಸ್ಟ್ ಬೈಂದೂರು ಇವರ ವತಿಯಿಂದ ಕನ್ನಡ ರಾಜ್ಯೋತ್ಸವದ ಆಚರಣೆ ನಡೆಯಿತು

ಬೈಂದೂರು:ಎಂ.ಬಿ. ಎಜುಕೇಷನ್ ಟ್ರಸ್ಟ್ ಬೈಂದೂರು ಮತ್ತು ಕ್ಯಾಡಮ್ಯಾಕ್ಷ ಸಂಸ್ಥೆ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಪ್ಪುಂದ ಶಂಕರಕಲಾ ಮಂದಿರದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಪ್ರಯುಕ್ತ ಸಭಾ ಹಾಗೂ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಶ್ರೀಮತಿ ವರಮಹಾಲಕ್ಷ್ಮಿ ಹೊಳ್ಳ ಉದ್ಘಾಟಿಸಿ ಮಾತನಾಡಿದರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಯು.ಸಿ.ಹೊಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಭಾಷೆ , ಸಂಸ್ಕ್ರತಿಯ ಇತಿಹಾಸ ಹಾಗೂ ಇಂದಿನ ಯುವ ಪೀಳಿಗೆಯ ಕರ್ತವ್ಯವನ್ನು ವಿವರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಮಣಿಕಂಠ ಉಪಸ್ಥಿತರಿದ್ದರು. ಭಾಗ್ಯಶ್ರಿ ಸ್ವಾಗತಿಸಿದರು. ಹಾಗೂ ಹೇಮಾ ವಂದಿಸಿದರು.ಹಾಗೂ ಪದ್ಮಶ್ರೀ ಕಾರ್ಯಕ್ರಮ ನಿರ್ವಹಣೆ ಮಾಡಿದರು.

MyByndoor
error: Mere Bai..Copy Matt Kar..