ಜಿ.ಪಂ ಸದಸ್ಯ ಸುರೇಶ್ ಬಾಟವಾಡಿಯವರಿಗೆ ಬೈಂದೂರು ಪಿಎಸ್‍ಐ ಅಗೌರವ ಆರೋಪ ಕುರಿತು  ಇಂದು ಪ್ರತಿಭಟನೆ ನಡೆಯಿತು

ಬೈಂದೂರು:ಶಿರೂರು ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ ಬಟವಾಡಿ ಹಾಗೂ ಸಾರ್ವಜನಿಕರ ಮೇಲೆ ಬೈಂದೂರು ಎಸ್ ಐ ತಿಮ್ಮೇಶರಿಂದ ಅವ್ಯಾಚ್ಯ ಶಬ್ಧ ಬಳಕೆ
ಮತ್ತು ನಿಂದನೆ ವಿರೋಧಿಸಿ ಇಂದು ಬೈಂದೂರು ಪೋಲಿಸ್ ಠಾಣೆ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ ದೂರು ನೀಡಲು ಬಂದ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ ಬಟವಾಡಿ ಮೇಲೆ ಬೈಂದೂರು ಎಸ್ ಐ ತಿಮ್ಮೇಶರಿಂದ ಅವ್ಯಾಚ್ಯ ಶಬ್ಧ ಬಳಸಿ ನಿಂದಿಸಿದ್ದಾರೆ ಇದರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕುಂದಾಪುರ DYSP P ದಿನೇಶ್ ಕುಮಾರ್ ಮಾತನಾಡಿ ದೂರನ್ನು ಪರೀಕ್ಷಿಸಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನ ಕುದ್ರು ,ದೀಪಕ್ ಕುಮಾರ್ ಶೆಟ್ಟಿ ಹಾಗೂ ಮುಂತಾದವರು ಹಾಜರಿದ್ದರು.

MyByndoor News
error: Mere Bai..Copy Matt Kar..