ಡಿಸೆಂಬರ್ 22 ರಂದು ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಉಚಿತ ಕಣ್ಣಿನ ತಪಾಸಣಾ,ಮಧುಮೇಹ ಹಾಗೂ ರಕ್ತ ಒತ್ತಡ ಶಿಬಿರ

ಬೈಂದೂರು: ಚರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆ ಕೋಟ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ,
ಅಂಧತ್ವ ನಿವಾರಣಾ ವಿಭಾಗ ಉಡುಪಿ,
JCI ಬೈಂದೂರು ಸಿಟಿ,
ದೇವಾಡಿಗ ಒಕ್ಕೂಟ ಬೈಂದೂರು,
ದೇವಾಡಿಗರ ಸಂಘ ಉಪ್ಪುಂದ,
ಸುವಿಚಾರ ಬಳಗ ಉಪ್ಪುಂದ,
DDUGYK ಕೇಂದ್ರ ಬೈಂದೂರು,
ಧ್ವನಿ ಬೆಳಕು ಸಂಯೋಜನಾ ಕೇಂದ್ರ ಬೈಂದೂರು ವಲಯಹಾಗೂ
ಬೈಂದೂರು ಸಮುದಾಯ ಆರೋಗ್ಯ ಕೇಂದ್ರ NCD ವಿಭಾಗ,
ಇವರ ಜಂಟಿ ಅಶ್ರಯದೊಂದಿಗೆ ಇದೆ ಬರುವ ಡಿಸೆಂಬರ್ 22 ರಂದು
ಶನಿವಾರ ಬೆಳಿಗ್ಗೆ 9:30 ರಿಂದ 12:30 ರ ವರೆಗೆ ಉಪ್ಪುಂದದ ಶಂಕರ ಕಲಾಮಂದಿರದಲ್ಲಿ ಉಚಿತ ಕಣ್ಣಿನ ತಪಾಸಣಾ,ಮಧುಮೇಹ ಹಾಗೂ ರಕ್ತ ಒತ್ತಡ ಶಿಬಿರ ನಡೆಯಲಿದೆ

ಶಿಬಿರದಲ್ಲಿ ಕಣ್ಣಿನ ತಪಾಸಣೆ ನಡೆಸಿ,ಹೊರೆ ರೋಗ ಶಸ್ತ್ರ ಚಿಕಿತ್ಸೆಗೆ ಒಳಪಡುವ ರೋಗಿಗಳನ್ನು ಶಿಬಿರದ ದಿನದಂದೇ

ಆಸ್ಪತ್ರೆಯ ವಾಹನದಲ್ಲಿ ಕರೆ ತಂದು ಮಂಗಳವಾರ ಬೆಳಿಗ್ಗೆ ವಾಪಾಸು ಕಳುಹಿಸಲಾಗುವುದು.

ರಿಯಾಯಿತಿ ದರದಲ್ಲಿ ಕನ್ನಡಕದ ವ್ಯವಸ್ಥೆಯನ್ನು ಮಾಡಲಾಗುವುದು.

ಲೇಸರ್ ಚಿಕಿತ್ಸೆಯ ವೆಚವನ್ನು ರಿಯಾಯಿತಿ ಸೌಲಭದಲ್ಲಿ ಕಲ್ಪಿಸಲಾಗುವುದು.

ಗ್ಲುಕೊಮಾ ಕಾಯಿಲೆಯನ್ನು ಆಧುನಿಕ ಹ್ಹಮ್ ಪ್ರೀ ಫೀಲ್ಡ್ ಅನಲೈಸೆರ್ ಉಪಕರಣದಿಂದ ಮಾಡಲಾಗುವುದು.

ಆಸ್ಪತ್ರೆಯಲ್ಲಿತಪಾಸಣಾ ವೆಚ್ಚವನ್ನುರಿಯಾಯಿತಿ ಸೌಲಭದಲ್ಲಿ ಕಲ್ಪಿಸಲಾಗುವುದು.

MyByndoor News
error: Mere Bai..Copy Matt Kar..