ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!!

ಟೆಲಿಕಾಂ ಕ್ಷೇತ್ರಂ ಜಿಯೋಮಯಂ! ದೇಶದಾದ್ಯಂತ ಮನೆಮಾತಾಗಿರುವ ರಿಲಯನ್ಸ್ ಜಿಯೋ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿ, ಟೆಲಿಕಾಂ ಕಂಪನಿಗಳಲ್ಲಿ ನಡುಕ ಹುಟ್ಟಿಸಿದೆ. ಜಿಯೋ ಪ್ರವೇಶಾತಿ ನಂತರ ದರ ಸಮರದಲ್ಲಿ ತೊಡಗಿರುವ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ ಗ್ರಾಹಕರನ್ನು ಉಳಿಸಲು ಹೊಸ ಹೊಸ ಆಫರ್ ಗಳನ್ನು ಘೋಷಿಸುತ್ತಿರುವುದು ನಮಗೆಲ್ಲಾ ತಿಳಿದಿದೆ. ಈ ಪರಿಯ ಸಂಚಲನಕ್ಕೆ ಕಾರಣವಾಗಿರುವ ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು? ಜಿಯೋ ಪ್ರಾರಂಭದ ಹಿಂದಿನ ರಹಸ್ಯವೇನು? ಇದಕ್ಕೆ ಪ್ರೇರಣೆ ಯಾರು? ಇತ್ಯಾದಿ ಬಗ್ಗೆ ನಿಮ್ಮಲ್ಲಿ ಕುತೂಹಲವಿರಬಹುದಲ್ಲವೆ.. ಅದಕ್ಕೆ ಉತ್ತರ ಇಲ್ಲಿದೆ ನೋಡಿ..

ಜಿಯೋ ಬಗ್ಗೆ ಜಗತ್ತಿನಾದ್ಯಂತ ಆಶ್ಚರ್ಯ ಜಗತ್ತಿನಾದ್ಯಂತ ಜಿಯೋ ಪ್ರಾಮುಖ್ಯತೆಯನ್ನು ಪಡೆದುಕೊಂಡು ಭಾರತದ ಟೆಲಿಕಾಂ ಉದ್ಯಮದ ಬಹುದೊಡ್ಡ ಭಾಗವನ್ನು ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅತೀ ಕಡಿಮೆ ಅವಧಿಯಲ್ಲಿ ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ಬಳಸುವ ಮಾರುಕಟ್ಟೆಯನ್ನಾಗಿ ಪರಿವರ್ತನೆ ಮಾಡಿತು ಎಂದು ಹಲವರು ಆಶ್ಚರ್ಯಪಟ್ಟಿದ್ದಾರೆ.   ಜಿಯೋ ಜನ್ಮ ತಳೆದಿದ್ದು 7 ವರ್ಷಗಳ ಹಿಂದೆ! ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪ್ರಕಾರ, ರಿಲಯನ್ಸ್ ಜಿಯೋ ಕಲ್ಪನೆಗೆ ಜನ್ಮ ನೀಡಿದ ಚಿಂತನೆಯು ಸುಮಾರು ಏಳು ವರ್ಷಗಳ ಹಿಂದೆ ಸಂಭವಿಸಿದೆ. ಜಿಯೋ ಐಡಿಯಾ ಕೊಟ್ಟಿದ್ದು ಇಶಾ ಅಂಬಾನಿ! ಹೌದು. ಏಳು ವರ್ಷಗಳ ಹಿಂದೆ 2011ರಲ್ಲಿ ನನ್ನ ಮಗಳು ಇಶಾ ಮೊದಲ ಬಾರಿ ಜಿಯೋ ಕಲ್ಪನೆಯನ್ನು ನೀಡಿದಳು. ಇಶಾ ನೀಡಿದ ದೂರು ಜಿಯೋ ಪರಿಕಲ್ಪನೆ ಸ್ಪೂರ್ತಿಯಾಯಿತು. ಆಗ ಇಶಾ ಯೇಲ್ ನಲ್ಲಿ ವಿದ್ಯಾರ್ಥಿಯಾಗಿದ್ದಳು ಮತ್ತು ರಜಾ ದಿನಗಳನ್ನು ಕಳೆಯಲು ಮನೆಗೆ ಬಂದಿದ್ದಳು ಎಂದು ಅಂಬಾನಿ ಹೇಳಿದ್ದಾರೆ. ಜಿಯೋ ಹುಟ್ಟಿಗೆ ಕಾರಣ ರಜೆಗಾಗಿ ಮನೆಗೆ ಬಂದ ಇಶಾ ಕೋರ್ಸ್ ವರ್ಕ್ ಸಬ್ಮಿಟ್ ಮಾಡಬೇಕಾಗಿತ್ತು. ಮನೆಯಲ್ಲಿ ನೆಟ್ವರ್ಕ್ ತುಂಬಾ ನಿಧಾನಗತಿಯಾಗಿದೆ ಎಂದು ಬೇಸತ್ತ ಇಶಾ ತಂದೆಗೆ ದೂರನ್ನು ನೀಡಿದಳು. ದೇಶದಲ್ಲಿ ಅಂತರ್ಜಾಲ ವೇಗ ತುಂಬಾ ನಿಧಾನಗತಿಯಲ್ಲಿದೆ ಎಂದು ದೂರಿದ ನಂತರ ಸ್ಫೂರ್ತಿ ಬಂದಿತು. ತಂದೆಗೆ ಆಕಾಶ್ ಹೇಳಿದ್ದೇನು? ಇಶಾ ಕಳಪೆ ಅಂತರ್ಜಾಲ ಸಂಪರ್ಕದ ಬಗ್ಗೆ ದೂರು ನೀಡಿದರೆ, ಮಗ ಆಕಾಶ್ ಅವರು

“ಡಿಜಿಟಲ್ ಜಗತ್ತನ್ನು” ಕುರಿತು ತಿಳಿಸಿದರು. ಮುಖೇಶ್ ಅಂಬಾನಿ ತನ್ನ ಮಗನೊಂದಿಗಿನ ಚಾಟ್ ಮಾಡುವಾಗಿನ ಘಟನೆಯನ್ನು ನೆನಪಿಸಿಕೊಂಡು, “ಡ್ಯಾಡ್, ನಿಮ್ಮ ಪೀಳಿಗೆಯು ಅದನ್ನು ಪಡೆಯುವುದಿಲ್ಲ” ಎಂದು ಆಕಾಶ್ ಹೇಳಿರುವುದನ್ನು ಉಲ್ಲೇಖಿಸಿದ್ದಾರೆ. ದೇಶದ ಯುವ ಪೀಳಿಗೆ ಹೆಚ್ಚು ಸೃಜನಶೀಲ ಭಾರತ ಯುವಜನತೆ ಹೇಗೆ ಜಿಯೋ ಜನ್ಮಕ್ಕೆ ಪ್ರೇರಣೆ ನೀಡಿದೆ ಎಂದು ಅಂಬಾನಿ ಹೇಳಿದ್ದಾರೆ. “ಭಾರತದ ಯುವ ಪೀಳಿಗೆಯು ಹೆಚ್ಚು ಸೃಜನಶೀಲವಾಗಿದೆ. ಹೆಚ್ಚು ಮಹತ್ವಾಕಾಂಕ್ಷೆಯುಳ್ಳವರಾಗಿದ್ದು, ಜಗತ್ತಿನಲ್ಲಿ ಅತ್ಯುತ್ತಮವಾದುದನ್ನು ಪಡೆಯುವ ತಾಳ್ಮೆ ಹೊಂದಿದ್ದಾರೆ. ತಂತ್ರಜ್ಞಾನ ಮತ್ತು ಭಾರತ ಬ್ರಾಡ್ಬ್ಯಾಂಡ್ ಅಂತರ್ಜಾಲವು ನಮ್ಮ ವಯಸ್ಸಿನವರಿಗೆ ಅತ್ಯಗತ್ಯವಾಗಿ ಬೇಕಾಗಿರುವ ತಂತ್ರಜ್ಞಾನ ಹಾಗು ಭಾರತ ಎಂದು ಕೂಡ ಈ ದಿಶೆಯಲ್ಲಿ ಹಿಂದೆ ಉಳಿಯುವುದಿಲ್ಲ ಎಂದು ಯುವ ಪೀಳಿಗೆಯ ಭಾರತೀಯರು ನನಗೆ ಮನವರಿಕೆ ಮಾಡಿದ್ದಾರೆ ಎಂದು ಅಂಬಾನಿ ಹೇಳಿದರು. ಕಳಪೆ ಸಂಪರ್ಕಜಾಲ ಮತ್ತು ಡಿಜಿಟಲ್ ಕೊರತೆ ಆ ಸಮಯದಲ್ಲಿ ಭಾರತ ಕಳಪೆ ಅಂತರ್ಜಾಲ ಸಂಪರ್ಕ ಹಾಗು ತೀವ್ರತರ ಸರ್ವರ್ ಕೊರತೆಯಿತ್ತು. ಬೇಕಾಗುವಷ್ಟು ಡೇಟಾ ಸೌಲಭ್ಯ ಇರಲಿಲ್ಲ. ಡೇಟಾ ದರ ಹೆಚ್ಚು ಇದ್ದುದ್ದರಿಂದ ಬಹುತೇಕ ಭಾರತೀಯರಿಗೆ ಕೈಗೆಟುಕುವ ದರದಲ್ಲಿ ಪಡೆಯುವುದು ಅಸಾಧ್ಯವಾಗಿತ್ತು ಎಂದು ಅಂಬಾನಿ ಹೇಳಿದ್ದಾರೆ. ಡೇಟಾ ಆಮ್ಲಜನಕ ಇದ್ದಂತೆ! ಡಿಜಿಟಲ್ ಇಂಡಿಯಾದಲ್ಲಿ ಡಿಜಿಟಲ್ ಲೈಫ್ ಗಾಗಿ ಡೇಟಾ ಆಮ್ಲಜನಕ ಇದ್ದ ಹಾಗೆ. ಪ್ರತಿಯೊಬ್ಬ ಭಾರತೀಯ ಡೇಟಾ ಸೌಲಭ್ಯ ಪಡೆಯಬೇಕೆಂದರೆ ಅದು ಕೈಗೆಟಕುವ ದರದಲ್ಲಿರಬೇಕು.

ಆದರೆ ಬಹುಪಾಲು ಭಾರತಿಯರಿಗೆ ಇದು ಅಸಾಧ್ಯವಾಗಿತ್ತು. ಆದರೆ ಜಿಯೋ ಪ್ರವೇಶಾತಿ ನಂತರ ಡೇಟಾ ದರ ಇಳಿದಿದ್ದು, ಸಾಕಾಗುವಷ್ಟು ಡೇಟಾ ಬಳಸಬಹುದಾಗಿದೆ. 2016 ರಲ್ಲಿ ಜಿಯೋ ಪ್ರಾರಂಭ ಬ್ರಾಡ್ಬ್ಯಾಂಡ್ ಅಂತರ್ಜಾಲ, ತಂತ್ರಜ್ಞಾನ, ಡೇಟಾ ಅಗತ್ಯ, ಡಿಜಿಟಲೀಕರಣದ ಮಹತ್ವ ಅರಿತು 2016 ರಲ್ಲಿ ಜಿಯೋ ಪ್ರಾರಂಭಿಸಲಾಯಿತು ಎಂದು ಅಂಬಾನಿ ಹೇಳಿದ್ದಾರೆ. ಆರ್ಐಎಲ್ ಸ್ವಾಮ್ಯದ ಅಂಗಸಂಸ್ಥೆಯಾಗಿ ಆರ್ಜಿಯೋ ತನ್ನ ಸೇವೆಗಳನ್ನು ಪ್ರಾರಂಭಿಸಿದೆ. ಭಾರತ ನಂಬರ್ ಒನ್ ಹೆಚ್ಚಿನ ಭಾರತೀಯರುಹಿಂದೆಂದಿಗಿಂತಲೂ ಮೊಬೈಲ್ ಮತ್ತು ಬ್ರಾಡ್ಬ್ಯಾಂಡ್ ಡೇಟಾವನ್ನು ಬಳಸುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯುವ ಹಾಗಿಲ್ಲ. ಅಂಬಾನಿ ಪ್ರಕಾರ, “ಭಾರತ ಎರಡು ವರ್ಷಗಳ ಕಡಿಮೆ ಅವಧಿಯಲ್ಲಿ ಮೊಬೈಲ್ ಬ್ರಾಡ್ಬ್ಯಾಂಡ್ ಡೇಟಾ ಬಳಕೆಯಲ್ಲಿ 155ನೇ ಸ್ಥಾನದಿಂದ ವಿಶ್ವದಲ್ಲೇ ಪ್ರಥಮ ಸ್ಥಾನಕ್ಕೆ ಏರಿದೆ.

--MyByndoor News--

Leave a Reply

Your email address will not be published.

error: Mere Bai..Copy Matt Kar..