ಏಪ್ರಿಲ್ 1 ರಿಂದ ರಾಜ್ಯಗಳ ಮಧ್ಯೆ ವ್ಯವಸ್ಥೆ ಜಾರಿಗೆ ಇ–ವೇ ಬಿಲ್: ಅಧಿಸೂಚನೆ ಪ್ರಕಟ

ನವದೆಹಲಿ: ರಾಜ್ಯಗಳ ಮಧ್ಯೆ ಸರಕು ಸಾಗಣೆಗೆ ಏಪ್ರಿಲ್‌1ರಿಂದ ಇ–ವೇ ಬಿಲ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯದ ಒಳಗೆ ಏಪ್ರಿಲ್‌ 15 ರಿಂದ ಹಂತ ಹಂತವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಜಿಎಸ್‌ಟಿ ವ್ಯವಸ್ಥೆಯಲ್ಲಿ, ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸಾಗಿಸಲು ಇ–ವೇ ಬಿಲ್ ವ್ಯವಸ್ಥೆ ರೂಪಿಸಲಾಗಿದೆ. ₹50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳನ್ನು 10 ಕಿ.ಮೀ ಆಚೆಗೆ ಸಾಗಿಸುವ ಮುಂಚೆಯೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

ಸರಕು ಸಾಗಿಸುವ ದೂರ ಆಧರಿಸಿ 1ರಿಂದ 20 ದಿನಗಳವರೆಗೆ ಬಿಲ್‌ನ ಸಿಂಧುತ್ವ ಇರುತ್ತದೆ. ಜಿಎಸ್‌ಟಿಎನ್‌ ಈ ಬಿಲ್‌ ವಿತರಿಸಲಿದೆ.

ಸರಕುಗಳನ್ನು ಸಾಗಿಸುವವರು ತಮ್ಮ ಜತೆ ಸರಕುಪಟ್ಟಿ, ಪೂರೈಕೆ ಬಿಲ್‌ ಅಥವಾ ಇ–ವೇ ಬಿಲ್‌ ಹೊಂದಿರಬೇಕು. ತೆರಿಗೆ ಅಧಿಕಾರಿಗಳು ಮಾರ್ಗಮಧ್ಯೆ ತಪಾಸಣೆ ನಡೆಸುವ ಅಧಿಕಾರ ಹೊಂದಿರುತ್ತಾರೆ.

ಅಂತರ್‌ ರಾಜ್ಯ ಸರಕುಗಳ ಸಾಗಾಣಿಕೆ ಮೇಲೆ ನಿಗಾ ಇಡಲು ಇದು ನೆರವಾಗಲಿದೆ. ತೆರಿಗೆ ತಪ್ಪಿಸುವ ಪ್ರವೃತ್ತಿಗೂ ಕಡಿವಾಣ ಹಾಕಲು ಇದರಿಂದ ಸಾಧ್ಯವಾಗಲಿದೆ.

ಸೀಮಾ ಸುಂಕದಿಂದ ಅನುಮತಿ ಪಡೆಯಬೇಕಾದ ಸಂದರ್ಭದಲ್ಲಿ, ಬಂದರು, ವಿಮಾನ ನಿಲ್ದಾಣ, ವಿಮಾನ ಸರಕು ಸಾಗಣೆ ಕಾಂಪ್ಲೆಕ್ಸ್‌ನಿಂದ ಸಾಗಿಸುವ ಸರಕುಗಳಿಗೆ ಇ–ವೇ ಬಿಲ್‌ ಅನ್ವಯವಾಗುವುದಿಲ್ಲ.

ರಿಟರ್ನ್ಸ್‌ ಸಲ್ಲಿಕೆ ಅವಧಿ ವಿಸ್ತರಣೆ
ಜೂನ್‌ ತಿಂಗಳವರೆಗೂ ಜಿಎಸ್‌ಟಿಆರ್‌–3ಬಿ ಸಲ್ಲಿಸಲು ಅವಕಾಶ ಇದೆ ಎಂದು ಕೇಂದ್ರ ಎಕ್ಸೈಸ್‌ ಮತ್ತು ಕಸ್ಟಮ್ಸ್‌ ಮಂಡಳಿ (ಸಿಬಿಇಸಿ) ಅಧಿಸೂಚನೆ ಹೊರಡಿಸಿದೆ.

ಒಂದು ತಿಂಗಳ ಜಿಎಸ್‌ಟಿಆರ್‌–3ಬಿ ಅನ್ನು ಮುಂದಿನ ತಿಂಗಳ 20ನೇ ತಾರೀಕಿನ ಒಳಗಾಗಿ ತುಂಬಬೇಕು. ಆದರೆ ಮಾರ್ಚ್‌ 10ರಂದು ನಡೆದ ಸಭೆಯಲ್ಲಿ ರಿಟರ್ನ್ಸ್ ಸಲ್ಲಿಕೆ ಅವಧಿ ವಿಸ್ತರಿಸಲು ನಿರ್ಧರಿಸಲಾಗಿತ್ತು.

--MyByndoor News--

Leave a Reply

Your email address will not be published.

error: Mere Bai..Copy Matt Kar..