ಆನ್‌ಲೈನ್ ಗೇಮಿಂಗ್ ಎಂಬ ಕರಾಳ ಲೋಕಕ್ಕೆ ‘ಪಬ್‌ಜಿ’ ಟ್ರೆಂಡ್ ಸಾಕು!!

ಆನ್​ಲೈನ್​ ಗೇಮ್ ಪಬ್​ಜಿ ವ್ಯಸನಕ್ಕೆ ಸಿಲುಕಿದ್ದ 19 ವರ್ಷದ ವಿಧ್ಯಾರ್ಥಿಯೋರ್ವ ತನ್ನ ತಂದೆ, ತಾಯಿ ಹಾಗೂ ತಂಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕಿಡಾದ ಸುದ್ದಿ ನಿಮ್ಮ ಕಿವಿಗೆ ಬಿದ್ದಿರಬಹುದು. ಇಲ್ಲಿ ವ್ಯಸನ ಎಂಬುದು ಯಾವುದೇ ಆಗಿರಬಹುದು. ಅದರಲ್ಲಿ ಈ ಗೇಮಿಂಗ್ ಪ್ರಪಂಚವನ್ನು ನಾವು ಬೇರೆಯಾಗಿ ನೋಡಿದರೆ ನಮ್ಮಷ್ಟು ದಡ್ಡರು ಯಾರು ಇಲ್ಲ. ಹೌದು, 12ನೇ ತರಗತಿಯಲ್ಲಿ ಓದುತ್ತಿದ್ದ ಸೂರಜ್ ಅಲಿಯಾಸ್ ಸರ್ನಾಮ್ ವರ್ಮಾ ಎಂಬ ವಿದ್ಯಾರ್ಥಿ ಇಂತಹ ಕೃತ್ಯವೊಂದನ್ನು ಎಸಗಿದ್ದ. ತನ್ನ ತಂದೆ ಮಿಥಿಲೇಶ್, ತಾಯಿ ಸಿಯಾ ಹಾಗೂ ತಂಗಿಯನ್ನು ಕೊಲೆ ಮಾಡಿಬಿಟ್ಟಿದ್ದ. ಇದಕ್ಕೆ ನೇರವಾಗಿ ಪಬ್‌ಜಿ ಕಾರಣ ಎಂದು ಹೇಳಲು ಆಗದಿರಬಹುದು. ಆದರೆ, ಗೇಮಿಂಗ್ ವ್ಯಸನವಂತೂ ಕಾರಣವಾಗಿರುತ್ತದೆ ಎಂಬುದುಮಾತ್ರ ಸತ್ಯ.

ಏಕೆಂದರೆ, ಎಂತಹ ಜನ, ಯಾವ ಯಾವ ಗೇಮ್‌ಗಳನ್ನು ಆಡುತ್ತಾರೆ. ಅವುಗಳು ಅವರ ಮಾನಸಿಕ ಸ್ಥಿತಿಯ ಮೇಲೆ ಬೀರುವ ಪರಿಣಾಮಗಳೇನು ಎಂಬುದನ್ನು ಕೆಲವು ಅಧ್ಯಯನ ವರದಿಗಳು ನೀಡಿರುವುದೇ ಇದಕ್ಕೆ ಉದಾಹರಣೆ. ಹಾಗಾಗಿ,ಇಂದಿನ ಲೇಖನದಲ್ಲಿ ಗೇಮಿಂಗ್ ವ್ಯಸನ ಎಂಬ ಕರಾಳ ಲೋಕಕ್ಕೆ ನಿಮ್ಮನ್ನು ತೆರೆದಿಡುವ ಪ್ರಯತ್ನ ನಮ್ಮದು. ಪಾರಾಗಬೇಕಿರುವುದು ನೀವು.!

--MyByndoor News--

Leave a Reply

Your email address will not be published.

error: Mere Bai..Copy Matt Kar..