ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ..!

ಏರ್ ಟೆಲ್ ಮತ್ತು ವೊಡಾಫೋನ್‌ ಜೊತೆ ಸ್ಪರ್ಧೆಗೆ ಇಳಿಯುವ ಕಾರಣದಿಂದ ಬಿಎಸ್ಎನ್ಎಲ್ ಸಂಸ್ಥೆ ತನ್ನ 525 ರುಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಪ್ರೀಮಿಯಂ ಗ್ರಾಹಕರು ಎಂದು ಯಾವುದೇ ಟೆಲಿಕಾಂ ಆಪರೇಟರ್ ಗಳು ಕೂಡ ಕರೆಯಬಹುದು ಮತ್ತು ಅದೇ ಕಾರಣಕ್ಕೆ ಪೋಸ್ಟ್ ಪೇಯ್ಡ್ ಪ್ಲಾನ್ ಗಳು ಇತ್ತೀಚೆಗೆ ಹಲವು ಡಾಟಾ ಮತ್ತು ಕರೆಗಳ ಅಧ್ಬುತ ಬೆನಿಫಿಟ್ ಗಳೊಂದಿಗೆ ಬರುತ್ತಿದೆ.

ಏರ್ ಟೆಲ್ ಮತ್ತು ವೊಡಾಫೋನ್‌ ನಂತಹ ಕಂಪೆನಿಗಳು ಹೆಚ್ಚು ಡಾಟಾಗಳನ್ನು ಆಫರ್ ಮಾಡುತ್ತಿದೆ ಮತ್ತು ಒಂದು ವೇಳೆ ನಿಗದಿಯಷ್ಟು ಡಾಟಾಗಳನ್ನು ಬಳಕೆಯಾಗದೇ ಇದ್ದಲ್ಲಿ ಅದನ್ನು ಮುಂದಿನ ತಿಂಗಳಿಗೆ ಮುಂದುವರಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತಿದೆ. ಬಿಎಸ್ಎನ್ಎಲ್ ಇದುವರೆಗೂ ಈ ವೈಶಿಷ್ಟ್ಯತೆಯೊಂದಿಗೆ ಬಂದಿರಲಿಲ್ಲ. ಇದೀಗ ಬಿಎಸ್ಎನ್ಎಲ್ ಕೂಡ ತನ್ನ 525 ರುಪಾಯಿಯ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಈ ವೈಶಿಷ್ಟ್ಯತೆಯನ್ನು ಸೇರಿಸಿದೆ. ಬಿಎಸ್ಎನ್ಎಲ್ ಸಂಸ್ಥೆ ಹೇಳಿಕೆ ನೀಡಿರುವಂತೆ ಇದೀಗ ಸದ್ಯ ಕೋಲ್ಕತ್ತಾದಲ್ಲಿ ಮಾತ್ರ ಈ ಸೇವೆ ಲಭ್ಯವಾಗಲಿದ್ದು ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಲಭ್ಯವಾಗಲಿದೆ.

ಹೊಸ ಆಫರ್ ನಲ್ಲಿ ಏನೇನಿದೆ? ಬಿಎಸ್ಎನ್ಎಲ್ ನ 525 ರುಪಾಯಿ ಪ್ಲಾನ್ ನಲ್ಲಿ ಅನಿಯಮಿತ ಕರೆಯನ್ನು ಭಾರತದಾದ್ಯಂತ ಎಲ್ಲಾ ನೆಟ್ ವರ್ಕ್ ಗಳಿಗೂ ನೀಡಲಾಗಿದೆ. 100ಎಸ್ಎಂಎಸ್ ಪ್ರತಿದಿನ ಉಚಿತವಾಗಿರುತ್ತದೆ. ಪ್ರತಿ ಅಂತರಾಷ್ಟ್ರೀಯ ಎಸ್ಎಂಎಸ್ ಗೆ 5 ರೂಪಾಯಿ ಚಾರ್ಜ್ ಮಾಡಲಾಗುತ್ತದೆ ಮತ್ತು 80ಜಿಬಿ ಡಾಟಾ ಸಿಗುತ್ತದೆ ಜೊತೆಗೆ 200ಜಿಬಿ ವರೆಗೆ ಡಾಟಾ ರೋಲ್ ಓವರ್ ಫೆಸಿಲಿಟಿ ಲಭ್ಯವಾಗುತ್ತದೆ.ಇದರ ಜೊತೆಗೆ ಬಿಎಸ್ಎನ್ಎಲ್ ಉಚಿತ ಅಮೇಜಾನ್ ಪ್ರೈಮ್ ಚಂದಾದಾರಿಕೆಯನ್ನು ಒಂದು ವರ್ಷದ ಅವಧಿಗೆ ನೀಡುತ್ತದೆ.

ಮ್ ಚಂದಾದಾರಿಕೆ ಪಡೆಯಲು ಎಷ್ಟು ರೀಚಾರ್ಜ್ ಮಾಡಬೇಕು? ಬಿಎಸ್ಎನ್ಎಲ್ ಇತ್ತೀಚೆಗಷ್ಟೇ 1 ವರ್ಷದ ಅಮೇಜಾನ್ ಪ್ರೈಮ್ ಚಂದಾದಾರಿಕೆಯನ್ನು ಬಿಎಸ್ಎನ್ಎಲ್ ಪೋಸ್ಟ್ ಪೇಯ್ಡ್ ಮತ್ತು ಬ್ರಾಡ್ ಬ್ಯಾಂಡ್ ಪ್ಲಾನ್ ಗಳ ಜೊತೆಗೆ ನೀಡುವ ಬಗ್ಗೆ ಅಮೇಜಾನ್ ಜೊತೆ ಕೈಜೋಡಿಸಿರುವುದನ್ನು ಪ್ರಕಟಿಸಿತ್ತು. ಒಂದು ವರ್ಷದ ಅಮೇಜಾನ್ ಪ್ರೈಮ್ ಚಂದಾದಾರಿಕೆಯ ಬೆಲೆಯು 999 ರುಪಾಯಿಗಳು. ಆದರೆ ಇದೀಗ ಬಿಎಸ್ಎನ್ಎಲ್ ಚಂದಾದಾರರು 399 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಪೋಸ್ಟ್ ಪೇಯ್ಡ್ ಪ್ಲಾನ್ ಅಥವಾ 745 ರುಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಬ್ರಾಡ್ ಬ್ರ್ಯಾಂಡ್ ರಿಚಾರ್ಜ್ ಮಾಡಿಕೊಂಡಾಗ ಅಮೇಜಾನ್ ಪ್ರೈಮ್ ಸದಸ್ಯತ್ವವು ಒಂದು ವರ್ಷದ ಅವಧಿಗೆ ಉಚಿತವಾಗಿ ಲಭ್ಯವಾಗುತ್ತದೆ. ಈ ಆಫರ್ ಭಾರತದಾದ್ಯಂತ ಎಲ್ಲಾ ಬಿಎಸ್ಎನ್ಎಲ್ ಗ್ರಾಹಕರು ಪಡೆದುಕೊಳ್ಳಬಹುದು.

ಆಫರ್ ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ? ಮೇಲೆ ತಿಳಿಸಿರುವ ಮೊತ್ತದ ಪ್ಲಾನ್ ನ್ನು ಖರೀದಿಸಿದ ನಂತರ ಬಿಎಸ್ಎನ್ಎಲ್ ವೆಬ್ ಸೈಟ್ www.portal.bsnl.in ಗೆ ತೆರಳಿ ಮತ್ತು ವಿಶೇಷ BSNL-Amazon offer ಬ್ಯಾನರ್ ನ್ನು ಕ್ಲಿಕ್ಕಿಸಿ. ನಿಮ್ಮ ಬಿಎಸ್ಎನ್ಎಲ್ ನಂಬರ್ ನ್ನು ಕ್ಲಿಕ್ಕಿಸಿ ಮತ್ತು ಉಚಿತ ಓಟಿಪಿಯನ್ನು ಜನರೇಟ್ ಮಾಡಿಕೊಳ್ಳಿ. ಓಟಿಪಿ ಎಂಟರ್ ಮಾಡಿದ ನಂತರ ಅಮೇಜಾನ್ ಪ್ರೈಮ್ ಚಂದಾದಾರಿಕೆಯು ಆಕ್ಟಿವೇಟ್ ಆಗಿರುವ ಮೆಸೇಜ್ ನಿಮಗೆ ಲಭ್ಯವಾಗುತ್ತದೆ.ಅದನ್ನು ಕ್ಲಿಕ್ಕಿಸಿ ಮತ್ತು ಅಮೇಜಾನ್ ಲಾಗಿನ್ ಕ್ರಿಡೆನ್ಶಿಯಲ್ಸ್ ಬಳಸಿ ಅಮೇಜಾನ್ ಗೆ ಲಾಗಿನ್ ಆಗಿ. ಒಂದು ಅಕೌಂಟ್ ಇಲ್ಲದೇ ಇದ್ದರೆ ಹೊಸ ಅಮೇಜಾನ್ ಅಕೌಂಟ್ ನ್ನು ಕ್ರಿಯೇಟ್ ಮಾಡಿ. ನಂತರ ಉಚಿತ ಪ್ರೈಮ್ ಚಂದಾದಾರಿಕೆಯನ್ನು ಪಡೆದು ಅಮೇಜಾನ್ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

--MyByndoor News--

Leave a Reply

Your email address will not be published.

error: Mere Bai..Copy Matt Kar..