ನವೆಂಬರ್ 30 ರಂದು ಉಡುಪಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇದರ ಆಶ್ರಯದಲ್ಲಿ ‘ಮಿನಿ ಉದ್ಯೋಗ ಮೇಳ’

ಮಿನಿ ಉದ್ಯೋಗ ಮೇಳ-ಪತ್ರಿಕಾ ಪ್ರಕಟಣೆ

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉಡುಪಿ ಇದರ ಜಂಟಿ ಆಶ್ರಯದಲ್ಲಿ ‘ಮಿನಿ ಉದ್ಯೋಗ ಮೇಳ’ ವನ್ನು *ನವೆಂಬರ್ 30 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಧಿಕಾರಿ ಸಂಕೀರ್ಣ ‘ಬಿ’ ಬ್ಲಾಕ್, ಕೊಠಡಿ ಸಂಖ್ಯೆ 201, ರಜತಾದ್ರಿ ಮಣಿಪಾಲ, ಉಡುಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸದರಿ ಉದ್ಯೋಗಮೇಳದಲ್ಲಿ KARNATAKA AGENCIES, BHARATH AUTO CARS, BSL INDIA, SIMPLY GRAMEEN BUSINESS, EUREKA FORBES, DIYA SOFTWARE, SWIGGI ಕಂಪೆನಿಗಳು ಭಾಗವಹಿಸಲಿದ್ದು, ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಎಂ.ಎಸ್.ಸಿ, ಎಂ.ಸಿ.ಎ ಹಾಗೂ ಐಟಿಐ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವ ವಿವರವುಳ್ಳ ಬಯೋಡಾಟಾ ಹಾಗೂ ಅಗತ್ಯ ದಾಖಲೆ ಹಾಗೂ ಆಧಾರ್ ಕಾರ್ಡ್‍ನೊಂದಿಗೆ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0820-2574869, 9945856670, 9480259790 ನ್ನು ಸಂಪರ್ಕಿಸಬಹುದಾಗಿದೆ.

--MyByndoor News--
error: Mere Bai..Copy Matt Kar..