ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆಯಡಿ ಪತ್ರಕರ್ತ “ಚಂದ್ರ ಕೆ. ಹೆಮ್ಮಾಡಿ” ಬಂಧನ..!

ಬೈಂದೂರು : ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ವಿಜಯ ಕರ್ನಾಟಕ ಪತ್ರಕರ್ತ “ಚಂದ್ರ ಕೆ. ಹೆಮ್ಮಾಡಿ” ಯನ್ನು ಪೋಲೀಸರು ಬಂಧಿಸಿದ್ದಾರೆ.

ಈತ ಬಾಲಕನ ಮೇಲೆ ಕಪ್ಪಾಡಿ, ಮೂರೂರು ಬದಿಯ ಕಾಡಿಗೆ ಕರೆದುಕೊಂಡು ಹೋಗಿ 3-4 ಬಾರಿ ದೌರ್ಜನ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯಿಂದ ಮಾನಸಿಕವಾಗಿ ನೊಂದು ಕುಗ್ಗಿದ್ದ ಬಾಲಕ ಎಲ್ಲೂ ಹೋಗದೆ ಖಿನ್ನತೆಯಿಂದ ಮನೆಯಲ್ಲಿಯೇ ಇರುತ್ತಿದ್ದ. ಇದರಿಂದ ಆತಂಕಗೊಂಡ ಪೋಷಕರು ಬಾಲಕನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ತಜ್ಞ ವೈದ್ಯರಿಂದ ಪರೀಕ್ಷಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು. ಬಾಲಕನ ತಂದೆ ನೀಡಿದ ದೂರಿನ ಮೇಲೆ ಆರೋಪಿ ಚಂದ್ರನನ್ನು ಬಂಧಿಸಲಾಗಿದೆ. ಕೆಲ ಫೋಟೊಗಳನ್ನು ತೆಗೆಯಲು ಕಾಡಿಗೆ ಹೋಗಲು ನಿಮ್ಮ ಮಗನನ್ನು ಕಳುಹಿಸಿಕೊಡಿ ಎಂದು ಬಾಲಕನ ತಂದೆಯಲ್ಲಿ ಹೇಳಿ ಚಂದ್ರ ಬಾಲಕನನ್ನು ಕರೆದುಕೊಂಡು ಹೋಗಿ, ಕಾಡಿನಲ್ಲಿ ಆ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಬಂಧಿತನನ್ನು ಇಂದು ಗುರುವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

--MyByndoor News--
error: Mere Bai..Copy Matt Kar..