ಕನಸಾಗಿಯೇ ಉಳಿದ ಯಡ್ತರೆ,ಬೈಂದೂರು, ಪಡುವರಿ ಗ್ರಾಮ ಪಂಚಾಯತ್ ಪುರಸಭೆ ಮೇಲ್ದರ್ಜೆ ಬೇಡಿಕೆ

ಬೈಂದೂರು:ಬೈಂದೂರು ನೂತನ ತಾಲೂಕಾಗಿ ಸುಮಾರು ಒಂದು ವರ್ಷ ಪೂರೈಸುತ್ತಾ ಬಂದರೂ ಇನ್ನೂ ಬೈಂದೂರು,ಪಡುವರಿ ಹಾಗೂ ಯಡ್ತರೆ ಗ್ರಾಮ ಪಂಚಾಯತ್ ಪುರಸಭೆಯಯಾಗಿ ಮೇಲ್ದರ್ಜೆಗೆ ಏರಿಸುವ ಬೇಡಿಕೆ ಕನಸಾಗಿಯೇ ಉಳಿದಿದೆ.

ಈಗಾಗಲೇ ಬೈಂದೂರು ನೂತನ ತಾಲೂಕಿನ ಯಡ್ತರೆ ಮತ್ತು ಬೈಂದೂರು ಗ್ರಾಮ ಪಂಚಾಯತ್ ಗಳಿಗೆ ಸಾರ್ವತ್ರಿಕ ಚುನಾವಣೆ ಜನವರಿ 2 2019ರಂದು ನಿಗದಿಯಾಗಿದ್ದು
ಯಡ್ತರೆ ಮತ್ತು ಬೈಂದೂರು ಗ್ರಾಮ ಪಂಚಾಯತ್ ನ ಸುಮಾರು 79 ಸ ಸ್ಥಾನಗಳು ಚುನಾವಣೆಗೆ ಸಿದ್ಧವಾಗಿವೆ.
ಹಾಗಾಗಿ ಈ ಭಾರಿಯೂ ಈ ಭಾಗದ ಜನರ ಪುರಸಭೆ ಬೇಡಿಗೆ ಮರೀಚಿಕೆಯಾಗಿಯೆ ಉಳಿದಿದೆ ಹಾಗೂ ಇನ್ನೂ 5 ವರ್ಷ ಊರಿನ ಬೆಳವಣಿಗೆ ಕುಂಠಿತ ವಾಗಲಿದೆ.
ಹಾಗಾಗಿ ಇದರ ಬಗ್ಗೆ ಸ್ಥಳೀಯ ಸ್ಥಳೀಯ ಶಾಸಕರು ಹಾಗೂ ಊರ ಮುಖಂಡರು ಗಮನ ಹರಿಸಿ ಗ್ರಾಮ ಪಂಚಾಯತ್ ಚುನಾವಣೆಯ ಬದಲು ಪುನಃ ಬೈಂದೂರು ಮತ್ತು ಯಡ್ತರೆ ಗ್ರಾಮ ಪಂಚಾಯತ್ ಗಳನ್ನೂ ಒಟ್ಟು ಸೇರಿ ಪುರಸಭೆ ಮಾಡಲು ಈಗಿನ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಬೇಕಾಗಿದೆ.

ಈಗಾಗಲೇ  ನೂತನ ತಾಲೂಕಾಗಿರುವ ಬೈಂದೂರಿಗೆ
ಸಮಸ್ಯೆಯಾಗಿ ಕಾಡುತ್ತಿರುವ

ಕುಡಿಯುವ ನೀರಿನ ಸಮಸ್ಯೆ
ಅಸಮರ್ಪಕ ಒಳಚರಂಡಿ ವ್ಯವಸ್ಥೆ
ಅಸಮರ್ಪಕ ಬೀದಿ ದೀಪದ ವ್ಯವಸ್ಥೆ
ಸರಿಯಾದ ಆಸ್ಪತ್ರೆಯ ವ್ಯವಸ್ಥೆ ಇಲ್ಲದಿರುವುದು
ಶಿಥಿಲಾಸ್ಥೆಯಲ್ಲಿರುವ ಬಸ್ ನಿಲ್ದಾಣ
ಅಸಮರ್ಪಕ ರಸ್ತೆಗಳು
ತಾಲೂಕಾಗಿ ಪರಿವರ್ತನೆ ಗೊಂಡರು ಸಹ ನಿರಂತರ ಪವರ್ ಕಟ್ ಸಮಸ್ಯೆ
ಹಾಗೂ ಮುಂತಾದ ಸಮಸ್ಯೆ ಗಳಿಂದಾಗಿ ಊರಿನ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ

ಹಾಗೆಯೇ ಪ್ರಸಿದ್ದ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆಂದು ಬರುವ ಪ್ರಯಾಣಿಕರಿಗೆ ಹಾಗೂ ತಾಲೂಕು ಕೇಂದ್ರಕ್ಕೆ ಕೆಲಸಕ್ಕಾಗಿ ಬರುವ ಪ್ರಯಾಣಿಕರಿಗೆ ಸರಿಯಾದ ಬಸ್ ನಿಲ್ದಾಣ ಇಲ್ಲವಾದ್ದರಿಂದ ಬೈಂದೂರು ಕೇಂದ್ರವನ್ನ ಗುರುತಿಸುವುದು ಕಷ್ಟವಾಗಿದೆ

ಹಾಗಾಗಿ ಈ ಭಾಗದ ಜನರು ಕೆಲವು ವರ್ಷದ ಹಿಂದೆ ಆಗಿನ ಮಾಜಿ ಶಾಸಕರಿಗೆ ಯಡ್ತರೆ,ತಗ್ಗರ್ಸೆ, ಪಡುವರಿ ಹಾಗೂ ಬೈಂದೂರು ಗ್ರಾಮ ಪಂಚಾಯ್ತ್ ಗಳನ್ನು ಒಟ್ಟುಗೂಡಿಸಿ ನೂತನ ಪುರಸಭೆ ಆಗಿ ಮೇಲ್ದರ್ಜೆಗೇರಿಸಬೇಕೆಂಬ ಸರಕಾರಕ್ಕೆ ಬೇಡಿಕೆ ಸಲ್ಲಿಸಿರುತ್ತಾರೆ.

ಈ ಪಂಚಾಯತ್ 23/06/1997ರ ಪೂರ್ವದಲ್ಲಿ ಬೈಂದೂರು ಪುರಸಭೆಯಾಗಿದ್ದು ತದನಂತರ ಎರಡು ಪಂಚಾಯತ್ ಗಳಾಗಿ ವಿಭಜನೆಗೊಂಡು ಯಡ್ತರೆ ಮತ್ತು ಬೈಂದೂರು ಪಂಚಾಯತ್ ಗಳಾಗಿ ಕಾರ್ಯನಿರ್ವಹಿಸುತ್ತಿದೆ.

ಬೈಂದೂರು ಯಡ್ತರೆ ಗ್ರಾಮದ ಹೃದಯ ಭಾಗವಾಗಿದ್ದು ಇಂದು ತಹಶೀಲ್ದಾರರ ಕಛೇರಿ,ಪಂಚಾಯತ್ ರಾಜ್ ಇಂಜಿನೀರಿಂಗ್ ಉಪ-ವಿಭಾಗ, ಮೆಸ್ಕಾಂ ಉಪ-ವಿಭಾಗ, ವಲಯಅರಣ್ಯಾಧಿಕಾರಿಗಳ ಕಛೇರಿ,ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮೂಹ ಸಂಪನ್ಮೂಲ ಕಛೇರಿ, ಸಮುದಾಯ ಆರೋಗ್ಯಕೇಂದ್ರ,ಉಪನೋಂದಾಣಾಧಿಕಾರಿ ಹಾಗೂ ಉಪ-ಖಜಾನೆ, ಪೋಲೀಸ್ ಠಾಣಾಧಿಕಾರಿ ಮತ್ತು ವೃತ್ತ ನಿರೀಕ್ಷಕರ ಕಛೆರಿ,ನಿರೀಕ್ಷಣಾ ಬಂಗಲೆ, ಹೆಸರಾಂತ ಶ್ರೀ ಮೂಕಾಂಬಿಕಾ ರೈಲ್ವೆ ಸ್ಟೇಶನ್, BSNL ಕಚೇರಿ, LIC ಕಚೇರಿ ಪಶು ಆಸ್ಪತ್ರೆ , ರೈತ ಸಂಪರ್ಕ ಕೇಂದ್ರ , 1 ಶಾಪಿಂಗ್ ಮಾಲ್ ಅಂಚೆ ಕಚೇರಿ ಪದವಿ-ಪೂರ್ವ ಕಾಲೇಜು,8ಹಿರಿಯ-ಕಿರಿಯ ಸರಕಾರಿ ಶಾಲೆಗಳು,6ಖಾಸಗಿ ವಿದ್ಯಾಸಂಸ್ಥೆಗಳು ಹಲವಾರು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಹಣಕಾಸುಸಂಸ್ಥೆಗಳು,ಶುಕ್ರವಾರದಂದು ಸಾರ್ವಜನಿಕ ಸಂತೆ,ಇನ್ನಿತರ ಧಾರ್ಮಿಕ ಸಾಂಸ್ಕ್ರತಿಕ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತದೆ.ಪಂಚಾಯತ್‌ ಸ್ವಾಮ್ಯದ ವಾಣಿಜ್ಯ ಸಂಕೀರ್ಣಗಳು, ಖಾಸಗಿ ಸ್ವಾಮ್ಯದ ವಾಣಿಜ್ಯ ಸಂಕೀರ್ಣ ಗಳು, 6 ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಗಳು, ವಾರದ ಸಂತೆ, 2 ಪೆಟ್ರೋಲ್‌ ಪಂಪ್‌ ಗಳು, ಸಭಾಭವನಗಳು, ವಿವಿಧ ಸಹಕಾರಿ ಸಂಘಗಳು, ಕೃಷಿ ಪತ್ತಿನ ಸಹಕಾರಿ ಸಂಘ, ಭೂ ಅಭಿವೃದ್ಧಿ ಬ್ಯಾಂಕ್‌ ಶಾಖೆ, ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಇತ್ಯಾದಿ  ನೂತನ ಪುರಸಭೆಗೆ ಪೂರಕ ಅಂಶಗಳು.

ವರದಿ: ಜಾಕ್ಸನ್ ಡಿಸಿಲ್ವ ಬೈಂದೂರು.

--MyByndoor News--
error: Mere Bai..Copy Matt Kar..