ಬೈಂದೂರು ಮನೆಮಾಡಿದ ಕ್ರಿಸ್‌ಮಸ್‌ ಸಂಭ್ರಮ

ಬೈಂದೂರು:ಇಲ್ಲಿನ ಹೋಲಿ ಕ್ರಾಸ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಇಲ್ಲಿನ ಕ್ರೈಸ್ತ ಬಾಂಧವರು ವಿಜೃಂಭಣೆಯಿಂದ ಆಚರಣೆ ಮಾಡಿದರು.
ಸೋಮವಾರ ರಾತ್ರಿಯೇ ಕ್ರೈಸ್ತ ಸಮುದಾಯದವರೆಲ್ಲಾ ಚರ್ಚ್‌ನಲ್ಲಿ ಸೇರಿ ಸಮುದಾಯದೊಂದಿಗೆ ಕ್ಯಾರಲ್ ಸಿಂಗ್ ಮಾಡಿದರು ನಂತರ ಚರ್ಚ್‌ನ ಧರ್ಮ ಗುರು ರೆ| ಫಾ| ರೊನಾಲ್ಡ್ ಮಿರಾಂದ ರವರು ಹಬ್ಬದ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.ಹಾಗೆಯೇ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅವರು ಜನರಿಗೆ
ನೀಡಿದ “ಕ್ರಿಸ್ಮಸ್ ಭರವಸೆಯ ಬದುಕಿಗೆ ಅವ್ಹನಃ”ಎಂಬ ಸಂದೇಶ ಜನರಿಗೆ ಮನದಟ್ಟು ಮಾಡಿಕೊಟ್ಟರು. ಕ್ರಿಸ್ಮಸ್ ಹಬ್ಬ ದೇವರ ಪ್ರೀತಿಯ ಅಘಾಧತೆ ತಿಳಿಸುವ ಹಬ್ಬವಾಗಿದೆ ಹಾಗಾಗಿ ಎಲ್ಲರೂ ತಮ್ಮ ಜೀವನದಲ್ಲಿ ಭರವಸೆ ಬೆಳಕು ಮೂಡಿಬರಬೇಕು ಎಂದು ಸಂದೇಶ ಸಾರಿದರು.

ಕರಾವಳಿ ಕ್ರೈಸ್ತರ ವಿಶೇಷ ಕ್ರಿಸ್ಮಸ್ ಆಚರಣೆ:

ಕರಾವಳಿ ಭಾಗದ ಕ್ರಿಶ್ಚಿಯನ್ ಸಮುದಾಯದವರು
ಕ್ರಿಸ್‌ಮಸ್‌ ಹಬ್ಬವನ್ನು ವಿಶಿಷ್ಟವಾಗಿ, ಅರ್ಥಪೂರ್ಣವಾಗಿ ಆಚರಿಸುತ್ತಾರೆ
ಹಬ್ಬದ ಅಂಗವಾಗಿ ತಮ್ಮ ಚರ್ಚ್‌ ಹಾಗೂ ತಮ್ಮ ಮನೆಗಳನ್ನೂ ವಿಶೇಷ ರೀತಿಯಲ್ಲಿ ದೀಪಾಲಂಕಾರ ಹಾಗೂ ಮನೆಗಳನ್ನೂ ಸಿಂಗರಿ ಸುತ್ತಾರೆ.
ಏಸು ದನದ ಕೊಟ್ಟಿಗೆ ಯಲ್ಲಿ ಜನಿಸಿದ್ದು ಎಂಬ ನಂಬಿಕೆಯೊಂದಿಗೆ ತಮ್ಮ ಮನೆಗಳಲ್ಲೂ ಕೊಟ್ಟಿಗೆ ಮಾದರಿ ನಿರ್ಮಿಸಿ ಗೋಧಲಿ ಯಲ್ಲಿ ಬಾಲ ಯೇಸುವಿನ ಮೂರ್ತಿಯನ್ನಿಟ್ಟು ನಮಿಸಸುತ್ತಾರೆ.
ಹೊಸ ಬಟ್ಟೆ ತೊಟ್ಟು ಚರ್ಚ್‌ಗೆ ತೆರಳಿ ಸಮುದಾಯದೊಂದಿಗೆ
ಕ್ಯಾ ರಲ್ ಸಿಂಗ್ ಮಾಡುತ್ತಾರೆ.
ಹಬ್ಬದ ಪೂಜೆ ಮುಗಿದ ತಕ್ಷಣ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.
ಕ್ರಿಶ್ಚಿಯನ್ ಸಮುದಾಯದವರು ವಿಶೇಷ ಸಿಹಿ ಭಕ್ಷ್ಯ ತಯಾರಿಸಿ ಅದನ್ನು ಅವರ ಕುಟುಂಬಸ್ಥರು ಹಾಗೂ
ನೆರೆಹೊರೆಯವರಿಗೆ ಹಂಚುತ್ತಾರೆ.

ವಿಶೇಷ ಆಕರ್ಷಣೆ ಪಡೆದ ಬಾಲ ಯೇಸುವಿನ ಗೋದಲಿ(ಗರ್ದಾನಾಚೆ ಗೋಟೋ):
ಕ್ರಿಸ್‌ಮಸ್ ವೇಳೆ ನಿರ್ಮಿಸುವ ಗೋದಲಿ ಎಲ್ಲರ ಆಕರ್ಷಣೆ. ಏಸು ದನದ ಕೊಟ್ಟಿಗೆಯಲ್ಲಿ ಜನಿಸಿದ ಎಂಬ ಕಾರಣಕ್ಕೆ ವಿಶೇಷ ರೀತಿಯಲ್ಲಿ ಈ ಗೋದಲಿಯನ್ನು ನಿರ್ಮಿಸಲಾಗುತ್ತದೆ.
ಬೈಂದೂರಿನ ICYM ತಂಡದವರು ಹಾಗೂ ಚರ್ಚಿನ ಯುವಕ ಯುವತಿಯರು ಚರ್ಚ್‌ ಬಳಿ ಗೋದಲಿ (ದನದ ಕೊಟ್ಟಿಗೆ) ನಿರ್ಮಿಸಿ ಬಾಲ ಏಸುವಿನ ಮೂರ್ತಿ ಪ್ರತಿಷ್ಠಾಪಿಸಿ ಅರಸಿದರು. ಗೋದಲಿಯನ್ನು ದೀಪಾಲಂಕಾರ, ಹೂಗಳಿಂದ ಸಿಂಗರಿಸಲಾಗಿತ್ತು. ಕ್ರಿಶ್ಚಿಯನ್ ಧರ್ಮದವರಷ್ಟೇ ಅಲ್ಲದೇ ನಾನಾ ಧರ್ಮದ ಅನುಯಾಯಿಗಳು, ಮಕ್ಕಳು ಇಲ್ಲಿಗೆ ಬಂದು ಬಾಲ ಏಸುವಿನ ಮೂರ್ತಿ ನೋಡಿ ಸಂಭ್ರಮಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
ನಡೆದವು.

ವರದಿ: ಜಾಕ್ಸನ್ ಡಿಸಿಲ್ವ – ಬೈಂದೂರು / ದುಬೈ
ಚಿತ್ರ ಕೃಪೆ:Aone Digitals Byndoor

ನನ್ನ ಎಲ್ಲಾ ಬೈಂದೂರಿನ ಕ್ರೈಸ್ತ ಬಾಂಧವರಿಗೆ ಹಾಗೂ ಎಲ್ಲರಿಗೂ ಮೈ ಬೈಂದೂರು ತಂಡದ ಪರವಾಗಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು

--MyByndoor News--
error: Mere Bai..Copy Matt Kar..