ದುಬೈನಲ್ಲಿ  ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಅದ್ದೂರಿಯಾಗಿ ನಡೆಯಿತು

ಬೈಂದೂರು: ಇಲ್ಲಿನ ಸೇಂಟ್ ಮೇರಿಸ್ ಚರ್ಚಿನಲ್ಲಿ ನಮ್ಮ ಭಾರತೀಯ ಕ್ರೈಸ್ತ ಬಾಂಧವರು ಕ್ರಿಸ್‌ಮಸ್ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು.
ಸೋಮವಾರ ರಾತ್ರಿಯೇ ಕ್ರೈಸ್ತ ಸಮುದಾಯದವರೆಲ್ಲಾ ಚರ್ಚ್‌ನಲ್ಲಿ ಸೇರಿ ಚರ್ಚ್‌ನ ಧರ್ಮಗುರು ರೆ ಫಾ ಲೆನ್ನಿ ಕೊನುಲಿ OFM CAP ಹಾಗೂ ಕೊಂಕಣಿ community ಫಾ |ಆಂಡ್ರ್ಯೂ ರವರು ಹಬ್ಬದ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.ಮನುಷ್ಯನ ತಪ್ಪುಗಳನ್ನು ಕ್ಷಮಿಸುವ ಮೂಲಕ ಆತನನ್ನು ಉತ್ತಮತೆ ಕಡೆಗೆ ಕರೆದೊಯ್ಯವ ಮಹಾನ್ ಗುಣಗಳನ್ನು ಬೆಳೆಸಿಕೊಳ್ಳುವ ಬೋಧಿಸಿದ ಯೇಸುವಿನ ಜನ್ಮ ದಿನ ಅತ್ಯಂತ ವಿಶೇಷವಾಗಿದೆ ಎಂದು ಫಾ |ಆಂಡ್ರ್ಯೂ ರವರು ಬೋಧಿಸಿದರು.

ಹಾಗೆಯೇ UAE ಬಿಷಪ್ ರವರು UAE ಯಲ್ಲಿ ನೆಲೆಸಿರುವ ಎಲ್ಲಾ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು. ಹಾಗೆಯೇ ಫೆಬ್ರವರಿ 3-5ರ uae ಗೆ ಭೇಟಿ ನೀಡಲಿರುವ ಅತಿ ವಂದನಿಯ ಪರಮ ಪೂಜ್ಯ ಪೋಪ್ ಫ್ರಾನ್ಸಿಸ್ ರವರ uae ಕಾರ್ಯಕ್ರಮದ ವಿವರ ಹಾಗೂ ಬಲಿಪೂಜೆಯ ವಿವರಗಳನ್ನು ಜನರಿಗೆ ಆನ್ಲೈನ್ ಟೆಲಿಕಾಸ್ಟ್ ಮೂಲಕ ತಿಳಿಸಿದರು.
ಪರಮ ಪ್ರಸಾದದ ಬಳಿಕ ಭಕ್ತರೆಲ್ಲರೂ ಕೆರೋಲ್ ಸಿಂಗಿಂಗ್ ನಲ್ಲಿ ಪಾಲ್ಗೊಂಡರು ಹಾಗೆಯೇ ಹಬ್ಬದ ಬಳಿಕ
ಹಬ್ಬದ ಪೂಜೆ ಮುಗಿದ ತಕ್ಷಣ ಭಕ್ತರು ತಮ್ಮ ಭಂದು ಭಾಂದವರು,ಮಿತ್ರರೊಂದಿಗೆ
ಶುಭಾಶಯ ವಿನಿಮಯ ಮಾಡಿ ಕೊಂಡರು.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಇಲ್ಲಿನ ಚರ್ಚ್ ವಿಶೇಷ ರೀತಿಯಲ್ಲಿ ದೀಪಾಲಂಕಾರ ಗೊಂಡಿತ್ತು.ಇಲ್ಲಿನ ಕ್ರಿಸ್ಮಸ್ ಟ್ರೀ ಜನರಿಗೆ ವಿಶೇಷ ಆಕರ್ಷಣೆ ಕೊಡುತ್ತಿತ್ತು.

ವರದಿ: ಜಾಕ್ಸನ್ ಡಿಸಿಲ್ವ – ಬೈಂದೂರು / ದುಬೈ

--MyByndoor News--
error: Mere Bai..Copy Matt Kar..