ಬೈಂದೂರು ಹೋಲಿ ಕ್ರಾಸ್ ಚರ್ಚಿನಲ್ಲಿ ಹೊಸ ವರ್ಷ ಸಂಭ್ರಮದ ಭಲಿಪೂಜೆ ನಡೆಯಿತು.

ಬೈಂದೂರು:ಬೈಂದೂರು ಹೋಲಿ ಕ್ರಾಸ್ ಚರ್ಚಿನಲ್ಲಿ ಹೊಸ 2019 ವರ್ಷ ಸಂಭ್ರಮದ ವಿಶೇಷ ಪೂಜೆ ಹಾಗೂ 2018 ರಲ್ಲಿ ನಮ್ಮ ಜೀವನದಲ್ಲಿ ನಡೆದ ಎಲ್ಲಾ ಒಳ್ಳೆಯ ಕಾರ್ಯಗಳಿಗೆ ದೇವರಿಗೆ ಧನ್ಯವಾದ ಸಮರ್ಪಣೆ ಪೂಜೆ ನಡೆಯಿತು.

ಸೋಮವಾರ ಸಂಜೆಯ ವೇಳೆ ಇಗರ್ಜಿಗಳಿಗೆ ತೆರಳಿದ ಕ್ರೈಸ್ತ ಬಾಂಧವರು ಕಳೆದ ವರ್ಷ ಸರ್ವ ರೀತಿಯಲ್ಲಿ ತಮ್ಮನ್ನು ಕಾಪಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ವರ್ಷ ಪ್ರತಿಯೊಬ್ಬರಿಗೂ ಸಂತೋಷ ತರಲಿ ಎಂದು ಬೇಡಿದರು.ಬೈಂದೂರು 
ಚರ್ಚ್‌ನ ಧರ್ಮ ಗುರು ರೆ| ಫಾ| ರೊನಾಲ್ಡ್ ಮಿರಾಂದ ರವರ ನೇತೃತ್ವದಲ್ಲಿ ರೆ| ಫಾ |ಪೀಟರ್ ಹಾಗೂ ಬ್ರ| ಜೋಸೆಫ್ ರೊಡ್ರಿಗಸ್ ರವರು ಹಬ್ಬದ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.

ನಮ್ಮ ಉಡುಪಿ ಧರ್ಮ ಪ್ರಾಂತ್ಯದ ಬಿಷಪ್‌ ವಂ. ಡಾ. ಜೆರಾಲ್ಡ್ ಐಸಾಕ್‌ ಲೋಬೊ
ರವರು ನೀಡಿದ ಸಂದೇಶ ನೂತನ ವರ್ಷದಲ್ಲಿ ದೇವರು ತೋರಿದ ಹಾದಿಯಲ್ಲಿ ನಡೆದು ವಿಶ್ವ ಶಾಂತಿಗಾಗಿ ಪ್ರತಿಯೊಬ್ಬರು ಸದಾ ಪ್ರಾರ್ಥನೆ ಸಲ್ಲಿಸುವಂತೆ ಕರೆ ನೀಡಿದರು.

ನನ್ನ ಎಲ್ಲಾ ಬೈಂದೂರಿನ ಕ್ರೈಸ್ತ ಬಾಂಧವರಿಗೆ ಹಾಗೂ ಎಲ್ಲರಿಗೂ ಮೈ ಬೈಂದೂರು ತಂಡದ ಪರವಾಗಿ ಹೊಸ ವರ್ಷದ ಶುಭಾಶಯಗಳು

ವರದಿ: ಜಾಕ್ಸನ್ ಡಿಸಿಲ್ವ – ಬೈಂದೂರು / ದುಬೈ
ಚಿತ್ರ ಕೃಪೆ:Aone Digitals Byndoor

 

--MyByndoor News--
error: Mere Bai..Copy Matt Kar..