ಜನವರಿ 19 ಮತ್ತು 20 ರಂದು ಉಡುಪಿಯಲ್ಲಿ ಉದ್ಯೋಗ ಮೇಳ

*ಪತ್ರಿಕಾ ಪ್ರಕಟಣೆ:*
*”ಉಡುಪಿ ಉದ್ಯೋಗ ಮೇಳ-2019″*

*‘ಸಂಚಲನ (ರಿ.)’ ಆಶ್ರಯದಲ್ಲಿ ಹಾಗೂ ‘ಉನ್ನತಿ ಕ್ಯಾರಿಯರ್ ಅಕಾಡೆಮಿ’ಯ ಪ್ರಾಯೋಜಕತ್ವದಲ್ಲಿ ಜಿಲ್ಲಾ ಮಟ್ಟದ “ಉಡುಪಿ ಉದ್ಯೋಗ ಮೇಳ 2019”*

*ದಿ.ಜನವರಿ 19 ಮತ್ತು 20, 2019 (ಶನಿವಾರ ಮತ್ತು ಭಾನುವಾರ)*

*ಸಮಯ: ಬೆಳಿಗ್ಗೆ 7ರಿಂದ ಸಂಜೆ 6ರ ತನಕ*

*ಸ್ಥಳ: ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ*

*ಸಂಚಲನ (ರಿ.) – ಸ್ವಯಂ ಸೇವಾ ಸಂಘಟನೆ ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ವಿವಿಧ ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಈಗಾಗಲೇ ಪರಿಸರ ಸಂರಕ್ಷಣೆ, ವಿಕಲಚೇತನರಿಗೆ ಸಹಾಯ,ಗ್ರಾಮೀಣ ಕ್ರೀಡೆ ಹಾಗೂ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ, ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ವಿವಿಧ ರೀತಿಯ ತರಬೇತಿ ಮತ್ತು ಉದ್ಯೋಗವಕಾಶದಂತಹ ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ.*

*‘ಉನ್ನತಿ ಕ್ಯಾರಿಯರ್ ಅಕಾಡೆಮಿ’ಯು ಉಡುಪಿಯಲ್ಲಿ ತನ್ನ ಕೇಂದ್ರದ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ರೀತಿಯ ಆಧುನಿಕ ತರಬೇತಿ ಹಾಗೂ ಕೋರ್ಸ್ ಗಳ ಮೂಲಕ ಉದ್ಯೋಗ ಅವಕಾಶಗಳನ್ನು ಒದಗಿಸುವ ಆಶಯ ಹೊಂದಿದೆ.*

*ಇದೀಗ ಸಂಚಲನ (ರಿ) ಆಶ್ರಯದಲ್ಲಿ ಹಾಗೂ ಉನ್ನತಿ ಕ್ಯಾರಿಯರ್ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನಾಚರಣೆ ಹಾಗೂ ‘ರಾಷ್ಟ್ರೀಯ ಯುವ ದಿವಸ’ದ ಅಂಗವಾಗಿ ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಉದ್ಯೋಗವಕಾಶ ಒದಗಿಸುವ ನಿಟ್ಟಿನಲ್ಲಿ ‘ಉಡುಪಿ ಉದ್ಯೋಗ ಮೇಳ 2019’ -ಬೃಹತ್ ಉದ್ಯೋಗವಕಾಶ ಒದಗಿಸುವ ಕಾರ್ಯಕ್ರಮವನ್ನು ಇದೇ ಬರುವ ಜನವರಿ 19 ಮತ್ತು 20,2019ರಂದು ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು, ಉಡುಪಿಯಲ್ಲಿ ಆಯೋಜಿಸಲಾಗಿದೆ. ಈ ಬೃಹತ್ ಉದ್ಯೋಗ ಮೇಳದಲ್ಲಿ ಸ್ಥಳೀಯ ಹಾಗೂ ಬೆಂಗಳೂರಿನ 150ಕ್ಕೂ ಹೆಚ್ಚಿನ ಕಂಪನಿಗಳು ಭಾಗವಹಿಸುತ್ತಿದ್ದು, ಸುಮಾರು 5000ಕ್ಕೂ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಒದಗಿಸುವ ಯೋಜನೆ ಹೊಂದಿದೆ. ಈ ಉದ್ಯೋಗ ಮೇಳದಲ್ಲಿ ವಿಶೇಷವಾಗಿ ಶೇ.50 ರಷ್ಟು ಉದ್ಯೋಗವಕಾಶವನ್ನು ಸ್ಥಳೀಯವಾಗಿ ಒದಗಿಸುವ ಪ್ರಯತ್ನ ಈ ಮೂಲಕ ನಡೆಯಲಿದೆ. ಈ ಕಾರ್ಯಕ್ರಮದ ಪ್ರಯೋಜನವನ್ನು ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಯುವಕ,ಯುವತಿಯವರು ಹೆಚ್ಚಿನ ರೀತಿಯಲ್ಲಿ ಪಡೆದುಕೊಳ್ಳಬೇಕೆಂದು ಹಾಗೂ ತಾವುಗಳು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಸಹಕರಿಸಬೇಕಾಗಿ ವಿನಂತಿಸುತ್ತೇವೆ.*

*ಉದ್ಯೋಗ ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹಾಗೂ ಯುವಕ ಯುವತಿಯರಿಗಾಗಿ ಈ ಕೆಳಗಿನ ಸೂಚನೆಗಳಿರುತ್ತವೆ:-*

*🔹ಉಡುಪಿ ಜಿಲ್ಲೆಯ 18 ರಿಂದ 40 ವರ್ಷ ವಯೋಮಿತಿಯ ವಿದ್ಯಾರ್ಥಿಗಳಿಗೆ ಹಾಗೂ ಯುವಕ, ಯುವತಿಯವರಿಗೆ ಮಾತ್ರ ಭಾಗವಹಿಸುವ ಅವಕಾಶವಿರುತ್ತದೆ.*

*🔹SSLC ಗಿಂತ ಕಡಿಮೆ, SSLC, PUC, ITI, ಡಿಪ್ಲೊಮಾ, ಪದವೀಧರ, ಸ್ನಾತಕೋತ್ತರ, ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಹಾಗೂ ಇತರ ಕೋರ್ಸ್ ಮುಗಿಸಿರುವ ಅಭ್ಯರ್ಥಿಗಳಿಗೆ ನಿಗದಿತ ದಿನದಂದು ಅವಕಾಶವಿರುತ್ತದೆ.*

*🔹ಡಿಸೆಂಬರ್ 20, 2018 ರಿಂದ ಜನವರಿ 11, 2019ರ ವರೆಗೆ ಕೆಳಗೆ ತಿಳಿಸಿರುವ ವಿಳಾಸದಲ್ಲಿ ಅಥವಾ ಆನ್ ಲೈನ್ ಮೂಲಕ ನೋಂದಣಿಯಾಗಿ, ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆಯಬೇಕು.*

*(ಆನ್ ಲೈನ್ ಮೂಲಕ ನೋಂದಣಿ ಮಾಡಿದ್ದರೂ, ನೋಂದಣಿ ಸಂಖ್ಯೆಯನ್ನು ತಿಳಿಸಿರುವ ಕಚೇರಿ ಮೂಲಕವೇ ಪಡೆಯತಕ್ಕದ್ದು)*

*🔹ಪ್ರತಿ ಅಭ್ಯರ್ಥಿಗಳಿಗೂ 3 ಕಂಪನಿಗಳ ಸಂದರ್ಶನಕ್ಕೆ ಅವಕಾಶ ಒದಗಿಸಲಾಗುವುದು.*

*🔹ಜನವರಿ 11, 2019 ರ ಒಳಗೆ ನೋಂದಣಿಗೊಂಡ ಅಭ್ಯರ್ಥಿಗಳಿಗೆ ಜನವರಿ 12, 2019ರಂದು ಒಂದು ದಿನದ ಸಂದರ್ಶನ ಎದುರಿಸುವ ಬಗ್ಗೆ ನುರಿತ ತಜ್ಞರಿಂದ ತರಬೇತಿ ನೀಡಲಾಗುವುದು.*

*🔹ಉದ್ಯೋಗ ಮೇಳ ನಡೆಯುವ ದಿನಾಂಕದಂದು ಬೆಳಿಗ್ಗೆ 7 ಗಂಟೆಗೆ ಸ್ಥಳದಲ್ಲಿ ನಿಗದಿತ ಅಭ್ಯರ್ಥಿಗಳು ಹಾಜರಿರತಕ್ಕದ್ದು.*

*🔹ಮೇಳದ ದಿನದಂದು ಅಭ್ಯರ್ಥಿಗಳು ತಮ್ಮ ಬಯೋಡೇಟಾದೊಂದಿಗೆ ತಮ್ಮ ಶೈಕ್ಷಣಿಕ ದಾಖಲಾತಿಗಳನ್ನು 5 ಪ್ರತಿಗಳಲ್ಲಿ ಕಡ್ಡಾಯವಾಗಿ ತರತಕ್ಕದ್ದು.*

*ಉದ್ಘಾಟನೆ*
*19. 01.2019 (ಶನಿವಾರ)*
*ಬೆಳಗ್ಗೆ 9:30ಕ್ಕೆ*

*ಸಮಾರೋಪ*
*20.01.2019 (ಭಾನುವಾರ)*
*ಸಂಜೆ 6 ಗಂಟೆಗೆ*
*ನೋಂದಣಿಗಾಗಿ:* *www.nammadeshprem.org* *ಮೂಲಕ ಆನ್ಲೈನ್ ನೋಂದಣಿ ಮಾಡಬಹುದು*

*ಕಚೇರಿ ವಿಳಾಸ:*

*‘ಆಶಾಚಂದ್ರ ಟ್ರೇಡ್ ಸೆಂಟರ್’,*
*2ನೇ ಮಹಡಿ, ಪಿಪಿಸಿ 1ನೇ ಅಡ್ಡ ರಸ್ತೆ,*
*ಉಡುಪಿ ಜಿಲ್ಲಾ ಕೋರ್ಟ್ ಎದುರುಗಡೆ,*
*ಉಡುಪಿ -576101*

*ಫೋನ್: 9448920303 / 8310497667*

*ಈ ಉದ್ಯೋಗ ಮೇಳದಲ್ಲಿ ಮಾನ್ಯ ಸಂಸದರು, ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು, ಖ್ಯಾತ ಉದ್ಯಮಿಗಳು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿರುತ್ತಾರೆ.*

*ವಂದನೆಗಳೊಂದಿಗೆ🙏,*
*ಪ್ರೇಮ್ ಪ್ರಸಾದ್ ಶೆಟ್ಟಿ,*
*ಅಧ್ಯಕ್ಷರು-ಸಂಚಲನ (ರಿ)*

--MyByndoor News--
error: Mere Bai..Copy Matt Kar..