ಗ್ರಾಮ ಪಂಚಾಯತಿ ಚುನಾವಣೆ ಯಡ್ತರೆ ಯಲ್ಲಿ ಕಾಂಗ್ರೆಸ್ ,ಬೈಂದೂರಿನಲ್ಲಿ ಬಿಜೆಪಿಗೆ ಬಹುಮತ

ಬೈಂದೂರು; ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಯಡ್ತರೆ ಗ್ರಾಮ ಪಂಚಾಯತಿ ಯಲ್ಲಿ ಕಾಂಗ್ರೆಸ್ ಹಾಗೂ ಬೈಂದೂರು ಗ್ರಾಮ ಪಂಚಾಯತಿ ಯಲ್ಲಿ
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಬಹುಮತ ಸಾಧಿಸಿದ್ದಾರೆ.

ಯಡ್ತರೆ ಪಂಚಾಯತ್ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ 19 ಸ್ಥಾನಗಳನ್ನು ಕಾ೦ಗ್ರೇಸ್ ಬೆ೦ಬಲಿತರು ಜಯಿಸುವ ಮೂಲಕ ಕಾ೦ಗ್ರೇಸ್ ಅಧಿಕಾರಕ್ಕೇರಿದೆ

ಬೈಂದೂರು ಗ್ರಾ.ಪಂ ನಲ್ಲಿ ಬಿಜೆಪಿ 17, ಕಾಂಗ್ರೆಸ್ 4 ಸ್ಥಾನ ಗಳಿಸುವುದರ ಮೂಲಕ ಬಿಜೆಪಿ ಅಧಿಕಾರ ಹಿಡಿದಿದೆ.

ಗಂಗೊಳ್ಳಿಯಲ್ಲಿ 23 ಬಿಜೆಪಿ, 6 ಕಾಂಗ್ರೆಸ್ ಹಾಗೂ 4 ಇತರ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ.2 ಪಕ್ಷದ ನಾಯಕರಿಗೂ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯ ಚುನಾವಣೆಯಾಗಿತ್ತು.

ಕೆರ್ಗಾಲ್ ಗ್ರಾಮ ಪಂಚಾಯತ್ ನ ಒಂದು ಸ್ಥಾನಕ್ಕೆ ನೆಡೆದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀ ಗಣಪತಿ ದೇವಾಡಿಗ
ಜಯ ಸಾಧಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಬೈಂದೂರು ಅಂಬೇಡ್ಕರ್ ಭವನದಲ್ಲಿ ಮತದಾನ ಎಣಿಕೆ ಕಾರ್ಯವನ್ನು ಬೈಂದೂರು ತಹಶೀಲ್ದಾರ ಕಿರಣ ಗೌರಯ್ಯ ನೇತ್ರತ್ವದಲ್ಲಿ ನಡೆದಿತ್ತು.ಸಂಭ್ರಮಿಸಿದರು.ಜಯಗಳಿಸಿದ ಮತ್ತು ಸ್ಪರ್ಧಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು

--MyByndoor News--
error: Mere Bai..Copy Matt Kar..