ಬೈಂದೂರಿನಲ್ಲಿ  ICYM ಘಟಕದ ವತಿಯಿಂದ ಯುವ ಸಾಂಸ್ಕೃತಿಕ್ ಸಾಂಜ್ ಕಾರ್ಯಕ್ರಮ ನಡೆಯಿತು.

ಬೈಂದೂರು:ಬೈಂದೂರಿನ ಹೋಲಿ ಕ್ರಾಸ್ ಚರ್ಚಿನ ICYM
ಘಟಕದ ವತಿಯಿಂದ ತಮ್ಮ 30 ನೇ ವಾರ್ಷಿಕೋತ್ಸವದ ಅಂಗವಾಗಿ, ಬೈಂದೂರು ಚರ್ಚಿನ ವಠಾರದಲ್ಲಿ ಯುವ ಸಾಂಸ್ಕೃತಿಕ್ ಸಾಂಜ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಪ್ರಸಿದ್ದ ಬರಹಗಾರ ಬರ್ನಾಡ್ ಕೋಸ್ಟಾ ಹಾಗೂ ನಿರ್ದೇಶನ ಶ್ರೀ ಜೋಸೆಫ್ ಫೆರ್ನಾಂಡಿಸ್ ಅವರ “ಹಾಂವ್ ಆಂವ್ಕಾರ್ಗೊ ಸಯ್ಬಿಣಿ “ಹಾಸ್ಯಮಯ ನಾಟಕ ಪ್ರದರ್ಶನ ಗೊಂಡಿತು.
ಈ ಸಂದರ್ಭದಲ್ಲಿ ಪ್ರಸಿದ್ದ ಬರಹಗಾರ ಬರ್ನಾಡ್ ಡಿಕೋಸ್ಟಾ ಹಾಗೂ ಶ್ರೀಮತಿ ವೀಣಾ ಫೆರ್ನಾಂಡಿಸ್ ರವರಿಗೆ ICYM ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಇದೆ ಸಂದರ್ಭದಲ್ಲಿ ಮುಂತಾದ ಮನೋರಂಜನಾ ಕಾರ್ಯ ಕ್ರಮಗಳು ಹಾಗೂ ಗಣ್ಯರಿಗೆ ಅಭಿನಂದನಾ ಸಮಾರಂಭ ಕಾರ್ಯಗಳು ನಡೆಯಿತು. ಈ ಸಂದರ್ಭದಲ್ಲಿ ಹೋಲಿ ಕ್ರಾಸ್ ಚರ್ಚಿನ ಧರ್ಮಗುರು ರೆ ಫಾ ರೊನಾಲ್ಡ್ ಮಿರಾಂದ, ಶ್ರೀ ಜೋಸೆಫ್ ಫೆರ್ನಾಂಡಿಸ್ ಹಾಗೂ ICYM ಘಟಕದ ಸದಸ್ಯರು ಉಪಸ್ಥಿತರಿದ್ದರು.

ವರದಿ: ಜಾಕ್ಸನ್ ಡಿಸಿಲ್ವ ಬೈಂದೂರು / ದುಬೈ
ಚಿತ್ರ:aone digitals Byndoor

--MyByndoor News--
error: Mere Bai..Copy Matt Kar..