ಜೆ.ಸಿ.ಐ.‌ಬೈಂದೂರು ಸಿಟಿ ಇವರಿಂದ ,ಮಂಗನ ಕಾಯಿಲೆ ಬಗ್ಗೆ ಜಾಗ್ರತಾ ಕಾರ್ಯಾಗಾರ ಹಾಗೂ ಮಾಹಿತಿ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.

ಬೈಂದೂರು:ಜೆ.ಸಿ.ಐ.‌ಬೈಂದೂರು ಸಿಟಿ ಇವರಿಂದ , ಮಂಗನ ಕಾಯಿಲೆ ಬಗ್ಗೆ ಜಾಗ್ರತಾ ಕಾರ್ಯಾಗಾರ ಹಾಗೂ ಮಾಹಿತಿ ಪತ್ರ ವಿತರಣಾ ಕಾರ್ಯಕ್ರಮ ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಎದುರು ನಡೆಯಿತು. ಬೈಂದೂರು ಸಂತೆ ಮಾರ್ಕೆಟ್ನಲ್ಲಿ ಹಾಗೂ ಬೈಂದೂರಿನ ಅಂಗಡಿಗಳಿಗೆ ಮಂಗನ ಕಾಯಿಲೆಯ ಮಾಹಿತಿಯ ಕರಪತ್ರವನ್ನು ಜಾಥದ ಮೂಲಕ ಹಂಚಲಾಯಿತು. ಬೈಂದೂರು ತಾಲೂಕು ವೈದ್ಯಾಧಿಕಾರಿಗಳಾದ ಡಾ.ಪ್ರೇಮಾನಂದ ಕರಪತ್ರ ಬಿಡುಗೊಡೆಗೊಳಿಸಿದರು. ಜೆ.ಸಿ.ಐ. ಅಧ್ಯಕ್ಷ ಮಣಿಕಂಠ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಜೆ.ಸಿಐ. ಪದಾಧಿಕಾರಿಗಳಾದ ರಾಘವೇಂದ್ರ ಹೊಳ್ಳ, ನರೇಂದ್ರ ಶೆಟ್, ರಾಘವೇಂದ್ರ , ಸತೀಶ್ ಎಮ್, ಮಾಣಿಕ್ಯ ಹೋಬಳಿದಾರ, ಶ್ರೀಧರ ಆಚಾರ್ಯ, ನಾಗರಾಜ್ ಶೆಟ್, ಅಶ್ರಪ್, ಮಾಧವ ಬಿಲ್ಲವ, ಸುನಂದಾ ಗಾಣಿಗ, ಪ್ರೇಮಾ, ಚೈತ್ರಾ ಉಪಸ್ಥಿತಿತರಿದ್ದರು. ಉದ್ಯಮಿಗಳಾದ ಶಬ್ಬಿರ್ , ಭಾಸ್ಕರ ಹಾಗೂ ಆರೋಗ್ಯ ಕೇಂದ್ರದ. ಸಂತೋಷ ಉಪಸ್ಥಿತಿತರಿದ್ದರು.

--MyByndoor News--
error: Mere Bai..Copy Matt Kar..