ಬೈಂದೂರಿನ ಕೆಲ ಭಾಗದಲ್ಲಿ ಲಘು ಭೂಕಂಪನ

ಬೈಂದೂರು: ಶುಕ್ರವಾರ ಬೈಂದೂರಿನ ಕೆಲ ಭಾಗದಲ್ಲಿ ಲಘು ಭೂಕಂಪನ ನಡೆದಿದೆ.ಇಲ್ಲಿನ ವಿಭೂತಿ ಜೆಡ್ಡು (ನಿತ್ಯದರ ನಗರ) ದ ಎರಡನೇ ಕ್ರಾಸಿನ ಕೆಲವು ಮನೆಗಳಲ್ಲಿ ಸುಮಾರು 5 ಸೆಕೆಂಡ್ ಪಾತ್ರೆ ಅಲುಗಾಡಿದ ಅನುಭವ ನಡೆದಿದೆ.
ಅದೇ ರೀತಿ ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶ ಗಳಾದ ಗಂಗನಾಡು,ಮದ್ದೊಡಿ, ಅತ್ಯಾಡಿ ಗೊಳಿಬೇರು ಇಲ್ಲಿ ಸಹ ಭೂಮಿ ಅಲುಗಾಡಿದ ಅನುಭವ ನಡೆದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಬೈಂದೂರು ತಹಶೀಲ್ದಾರ್ ಕಿರಣ್ ಗೊರಯ್ಯ ರವರು ಇದರ ಬಗ್ಗೆ ಶೀಘ್ರ ಮಾಹಿತಿ ಪರಿಶೀಲಿಸಲಾಗುವುದು ಎಂದು ಹೇಳಿದರು.ಜನರು ಇದರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

--MyByndoor News--
error: Mere Bai..Copy Matt Kar..