ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿ (SH-27)ವಂಡ್ಸೆ ಭಾಗದಲ್ಲಿ 200 ಲಕ್ಷದ ರಸ್ತೆ ಸುರಕ್ಷತಾ ಕಾಮಗಾರಿಗೆ ಬೈಂದೂರು ಶಾಸಕರಾದ ಬಿ ಎಮ್ ಸುಕುಮಾರ ಶೆಟ್ಟಿ ಚಾಲನೆ ನೀಡಿದರು

ಬೈಂದೂರು ವಿಧಾನಸಭಾ ಕ್ಷೇತ್ರದ ವಿರಾಜಪೇಟೆ _ಬೈಂದೂರು ರಾಜ್ಯ ಹೆದ್ದಾರಿ (SH-27)ವಂಡ್ಸೆ ಭಾಗದಲ್ಲಿ 200 ಲಕ್ಷದ ರಸ್ತೆ ಸುರಕ್ಷತಾ ಕಾಮಗಾರಿಗೆ ಬೈಂದೂರು ಶಾಸಕರಾದ ಬಿ ಎಮ್ ಸುಕುಮಾರ ಶೆಟ್ಟಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕೊಲ್ಲೂರು ಇತಿಹಾಸ ಪ್ರಸಿದ್ಧ ದೇವಸ್ಥಾನವಾಗಿದ್ದು ಹೆಮ್ಮಾಡಿಯಿಂದ ಕೊಲ್ಲೂರು ಮಾರ್ಗವಾಗಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಸಮಯದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ಉದ್ದೇಶಕ್ಕೆ ಅಲ್ಲಲ್ಲಿ ತಿರುವುಗಳನ್ನು ನೇರ ರಸ್ತೆಗಳನ್ನಾಗಿ ಪರಿವರ್ತಿಸುವ ವ್ಯವಸ್ಥೆ ಮಾಡುತ್ತಿದ್ದು ಆ ನಿಟ್ಟಿನಲ್ಲಿ ಇವತ್ತು ವಂಡ್ಸೆಯ ಈ ಪರಿಸರದಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

ಬೈಂದೂರು ತಾಲೂಕಿನ ಜನಮನದ ಜೀವನಾಡಿ.

Leave a Reply

Your email address will not be published. Required fields are marked *

error: My Dear Brother, Please Dont Copy :)