ನಾಯ್ಕನಕಟ್ಟೆ : ಆಯುಷ್ ವಿಶೇಷ ಮಕ್ಕಳ ಶಾಲೆ ಆರಂಭ

ಬೈಂದೂರು: ಸಮುದಾಯದಲ್ಲಿರುವ ವಿಶೇಷ ಮಕ್ಕಳನ್ನು ಉಳಿದ ಮಕ್ಕಳಿಗೆ ಸಮಾನವಾಗಿ ಕಾಣಬೇಕು. ಯಾವುದೇ ಕಾರಣಕ್ಕೂ ತಾರತಮ್ಯ ಮಾಡಕೂಡದು ಎಂದು ಜಿಲ್ಲಾ ವಿಶೇಷ ಚೇತನರ ಕಲ್ಯಾಣಾಧಿಕಾರಿ ಎಂ. ನಿರಂಜನ ಭಟ್ ಹೇಳಿದರು.

ನಾಯ್ಕನಕಟ್ಟೆ ಸಂವೇದನಾ ಟ್ರಸ್ಟ್ ಆಶ್ರಯದಲ್ಲಿ ಅಲ್ಲಿನ ಸಂವೇದನಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭವಾದ ಆಯುಷ್ ವಿಶೇಷ ಮಕ್ಕಳ ಶಾಲೆಯನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಇಂಥ ಮಕ್ಕಳ ಕಲ್ಯಾಣಕ್ಕೆ ಕಾಯ್ದೆ ಇದೆ. ತಾರತಮ್ಯ, ಅಸಡ್ಡೆ ಅಪರಾಧವೆನಿಸುತ್ತದೆ. ಅವರ ಸಂರಕ್ಷಣೆಯ ಹೊಣೆ ಸಮುದಾಯದ ಮೇಲಿದೆ. ಅಂತಹ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಕೆಲವು ಹಂತದ ಕ್ರಮಗಳನ್ನು ಅನುಸರಿಸಬೇಕು ಎಂದರು.

ಟ್ರಸ್ಟ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಇಸ್ರೋದ ಹಿರಿಯ ವಿಜ್ಞಾನಿ ಭಾಸ್ಕರ ಮಂಜ, ಹಿರಿಯ ಪ್ರಯೋಗಾಲಯ ಪರಿಣತೆ ಅನುರಾಧಾ ಭಾಸ್ಕರ ಮಂಜ, ಉಪ್ಪುಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಜಿ. ಎಸ್. ಭಟ್, ಟ್ರಸ್ಟ್ ಉಪಾಧ್ಯಕ್ಷ ಡಾ. ಅನಿಲ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್. ರವೀಂದ್ರ, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ, ವಿದ್ಯಾರ್ಥಿ ಪ್ರತಿನಿಧಿ ವೀಣಾ ನಾಯಕ್ ಅತಿಥಿಗಳಾಗಿದ್ದರು. ಪ್ರಾಂಶುಪಾಲೆ ಸಂಧ್ಯಾ ಭಟ್, ಉಪನ್ಯಾಸಕಿ ರಾಧಾ, ಅಶ್ವಿನಿ ನಾಯಕ್ ಇದ್ದರು.

ಕಾಲೇಜು ವಾರ್ಷಿಕೋತ್ಸವ ನಿಮಿತ್ತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಯಿತು.

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)