ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ : ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿನಿಯರಿಂದ ಸಂತೆಯೊಳಗೊಂದು ಸಂತೆ

ಬೈಂದೂರು : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಸೇರಿಕೊಂಡು ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ವಿವಿಧ ರೀತಿಯ ತಿಂಡಿಗಳು, ಉಡುಪು ಹಾಗೂ ಗ್ರಹಬಳಕೆ ವಸ್ತು ಮಾರಾಟ ಮಳಿಗೆ “ಸಂತೆಯೊಳಗೊಂದು ಸಂತೆ” ಕಾರ್ಯಕ್ರಮ ನಡೆಯಿತು.

ಸಂತೆಯೊಳಗೊಂದು ಸಂತೆಯಲ್ಲಿ ಏನು ಸಿಗುತ್ತೆ ನೋಡಿ : ಕಾಲೇಜು ವಿದ್ಯಾರ್ಥಿನಿಯರ ಮನೆಯಲ್ಲಿ ಬೆಳೆದ ವಿವಿಧ ಹಣ್ಣುಗಳು, ವಿದ್ಯಾರ್ಥಿಗಳು ತಯಾರು ಮಾಡಿದ ತರಕಾರಿ ಬಿರಿಯಾನಿಗಳು, ವಿವಿಧ ಬಗೆಯ ಜ್ಯೂಸ್‍ಗಳು ಸಿದ್ಧಪಡಿಸಿಕೊಂಡು ವ್ಯಾಪಾರವನ್ನು ಮಾಡುತ್ತಿದ್ದಾರೆ.

 

ಬಂದ ಹಣದ ಉಪಯೋಗ : ವಿವಿಧ ರೀತಿಯ ತಿಂಡಿಗಳು, ಉಡುಪು ಹಾಗೂ ಗ್ರಹಬಳಕೆ ವಸ್ತು ಮಾರಾಟದಲ್ಲಿ ಬಂದ ಹಣವನ್ನು ಇತ್ತೀಚಿಗಷ್ಟೇ ಪುಲ್ವಾಮದಲ್ಲಿ ಹುತಾತ್ಮಾರಾದ ವೀರಯೋಧರ ಕುಟುಂಬಕ್ಕೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಒಂದು ದಿನ ವೀರಯೋಧರಿಗೆ ಮೀಸಲು : ವಿದ್ಯಾರ್ಥಿನಿಯರು ವಿವಿಧ ರೀತಿಯ ತಿಂಡಿಗಳು, ಉಡುಪು ಹಾಗೂ ಗ್ರಹಬಳಕೆ ವಸ್ತು ಮಾರಾಟ ಮಾಡುವ ವಸ್ತುಗಳನ್ನು ಬೈಂದೂರಿನ ಜನತೆ ಇದನ್ನು ಸದುಪಯೋಗವನ್ನು ಮಾಡಿಕೊಳ್ಳಬೇಕು. ಇದು ಕೇವಲ ಫ್ಯಾಶನ್‍ಗಾಗಿ ಅಲ್ಲಾ. ಇದು ದೇಶಕ್ಕಾಗಿ ಮಡಿದ ವೀರ ಯೋಧರಿಗೆ ಗೌರವ ಸಲ್ಲಿಸೋಣ.

ಸಂತೆಯೊಳಗೊಂದು ಸಂತೆಯಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರ ವೃಂದ, ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

sa

ಚಿತ್ರ : ಹೆಚ್. ಸುಪ್ರೀತ್ ಬೈಂದೂರು
ವರದಿ : ಹೆಚ್. ಸುಶಾಂತ್ ಬೈಂದೂರು

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)