ಜೆಸಿಐ ಉಪ್ಪುಂದ ವತಿಯಿಂದ ಹ್ಯಾಂಡ್ ವಾಶ್ ಡೇ

ಬೈಂದೂರು : ಜೆಸಿಐ ಉಪ್ಪುಂದ ವತಿಯಿಂದ ಕಂಚಿಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಪುಟ್ಟ ಮಕ್ಕಳಿಗೆ ಕೈ ತೊಳೆಯುವ ವಿಧಾನದ ತರಬೇತಿ ಕಾರ್ಯಕ್ರಮ ಶನಿವಾರ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.

ಜೆಸಿಐ ಉಪ್ಪುಂದ ಇದರ ಅಧ್ಯಕ್ಷ ಜೆಸಿ. ಪುರಂದರ ಖಾರ್ವಿ ಅಧ್ಯಕ್ಷತೆ ವಹಿಸಿ, ಮಾತನಾಡಿ ಕೈ ತೊಳೆಯಲು ಎಲ್ಲರಿಗೂ ಗೊತ್ತಿದೆ, ಇದರ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ ಎಂದು ಅಂದುಕೊಳ್ಳಬೇಡಿ. ಆದರೆ ಕೈ ತೊಳೆಯಲು ಕೂಡಾ ಒಂದು ವಿಧಾನವಿದೆ. ಬಹುತೇಕ ಜನರು ತಮ್ಮ ಕೈಗಳನ್ನು 5 ಸೆಕೆಂಡುಗಳಲ್ಲಿ ತೊಳೆಯುತ್ತಾರೆ. ಆದರೆ ಕೈಗಳನ್ನು ಕನಿಷ್ಠ 20 ರಿಂದ 30 ಸೆಕೆಂಡುಗಳ ಕಾಲ ತೊಳೆಯಬೇಕು.ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸ ಹೇಳಿಕೊಡುವುದು ಅತ್ಯಂತ ಮುಖ್ಯ. ಯಾಕೆಂದರೆ ಅವರು ಶಾಲೆಗೆ ಹೋಗಿ ಇತರ ಮಕ್ಕಳೊಂದಿಗೆ ಆಟವಾಡುತ್ತಾರೆ ಎಲ್ಲಾ ವಸ್ತುಗಳನ್ನು ಮುಟ್ಟುತ್ತಾರೆ ಮತ್ತು ಶಾಲೆಯಲ್ಲಿಯೇ ಊಟಮಾಡುತ್ತಾರೆ ಹಾಗಾಗಿ ಕೈ ತೊಳೆಯುದರ ವಿಧಾನ ಬಗ್ಗೆ ತಿಳಿದು ಕೊಳ್ಳುವುದ ಅನಿವಾರ್ಯ ಎಂದು ಹೇಳಿದರು.

ಸಿಆರ್‍ಪಿ ಸುಬ್ರಹ್ಮಣ್ಯ ಜಿ ಉಪ್ಪುಂದ ಅವರು ಶಾಲಾ ವಿದ್ಯಾರ್ಥಿಗಳಿಗೆ ಈ ಬಗ್ಗೆ ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕ ಮಹಾಬಲೇಶ್ವರ ಐತಾಳ್, ಕಾರ್ಯಕ್ರಮದ ಸಂಯೋಜಕರಾದ ಜೆಸಿ ಉಪ್ಪುಂದದ ಖಜಾಂಜಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಜೆಸಿ ದೇವೇಂದ್ರ ಆಚಾರ್ಯ, ಜೆಸಿ ಅವಿನಾಶ್ ಉಪ್ಪುಂದ, ಉಪಾಧ್ಯಕ್ಷರಾದ ಶ್ರೀಗಣೇಶ್ ಗಾಣಿಗ ಉಪ್ಪುಂದ, ಶಿಕ್ಷಕರಾದ ,ಜಯಾನಂದ ಪಟಗಾರ್, ಬಾಲಕೃಷ್ಣ, ಜ್ಯೋತಿ ಶೆಟ್ಟಿ, ಯಶೋಧ.ಬಿ., ಸಾವಿತ್ರಿ, ಜೆಸಿ ವಿಜಯ್ ಶೆಟ್ಟಿ, ಜೆಸಿ ಜಗದೀಶ್ ದೇವಾಡಿಗ ಉಪಸ್ಥಿತರಿದ್ದರು,

ಜೆಸಿಐ ಉಪ್ಪುಂದ ಕಾರ್ಯದರ್ಶಿ ಜೆಸಿ ದೇವರಾಯ ದೇವಾಡಿಗ ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)