ಕಿರಿಮಂಜೇಶ್ವರ ವಲಯ  : 11 ನೇ ವರ್ಷದ ಶ್ರೀ ದುರ್ಗಾ ದೀಪಾ ನಮಸ್ಕಾರ ಹಾಗೂ ಒಕ್ಕೂಟ ಪದಗೃಹಣ ಕಾರ್ಯಕ್ರಮ

ಬೈಂದೂರು : ಶ್ರೀ ಕ್ಷೆತ್ರ ಧರ್ಮಸ್ಥಳ ಗಾಮಾಭಿವೃದ್ದಿ ಯೋಜನೆ (ರಿ) ಬೈಂದೂರು ಕಿರಿಮಂಜೇಶ್ವರ ವಲಯ ಉಳ್ಳೂರು 11 ಒಕ್ಕೂಟದಲ್ಲಿ ನಡೆದ 11 ನೇ ವರ್ಷದ ಶ್ರೀ ದುರ್ಗಾ ದೀಪಾ ನಮಸ್ಕಾರ ಹಾಗೂ ಒಕ್ಕೂಟ ಪದಗೃಹಣ ಕಾರ್ಯಕ್ರಮದ ಅಕಾರ ಹಸ್ತಾಂತರ ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆಯಿತು.

ಶ್ರೀಕ್ಷೇತ್ರ ಧರ್ಮಸ್ಥಳದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ ಅಕಾರ ಹಸ್ತಾಂತರ ನಡೆಸಿಕೊಟ್ಟರು. ಬಳಿಕ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.

ಶ್ರೀ ಮೆಕೋಡು ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಎಸ್ ಪ್ರಕಾಶ್ ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಜನಜಾಗ್ರತಿ ವೇದಿಕೆ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮವನ್ನು ಉದ್ಗಾಟಿಸಿ ಧಾರ್ಮಿಕತೆಯ ಬಗ್ಗೆ ಹೆಚ್ಚು ಒತ್ತನು ಕೊಡುವುದರ ಜೊತೆಗೆ ಇತ್ತೀಚಿಗೆ ನಡೆಯುತ್ತಿರುವ ಮೆಹಂದಿ ಕಾರ್ಯಕ್ರಮದಲ್ಲಿ ನಡೆಯುವ ಮದ್ಯವ್ಯಸನವನ್ನು ನಿಲ್ಲಿಸಬೇಕು ಎಂದು ಯುವ ಜನತೆಗೆ ಮನವ ಮಾಡಿದರು.

ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್, ಶ್ರೀ ಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಜುನಾಥ ಆಚಾರ್ಯ ಬಡಾಕೆರೆ, ಹೇರೂರು ಗ್ರಾ.ಪಂ. ಉಪಾಧ್ಯಕ್ಷ ಶೇಖರ ಗುಡಾಡಿ, ಕುಂದಾಫುರ ಕೇಂದ್ರ ಸಮಿತಿ ಅಧ್ಯಕ್ಷ ಕೃಷ್ಣ ಪೂಜಾರಿ. ಜಿಲ್ಲಾ ನಿರ್ದೇಶಕಪುರುಷೋತ್ತಮ ಪಿ ಕೆ., ಯೋಜನಾಕಾರಿ ಮಮತಾ. ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷೆ ಸುಮಾ ಆಚಾರ್, ನೂತನ ಅಧ್ಯಕ್ಷ ದಿನೇಶ ಆಚಾರ್ ಹಾಗೂ ಪದಾಕಾರಿಗಳು, ಉಪಸ್ಥಿತರಿದ್ದರು. ಒಕ್ಕೂಟದ ಎಲ್ಲಾ ಸದಸ್ಯರು ಸೇವಾಪ್ರತಿನಿದಿಗಳು ಹಾಗೂ ಊರಿನ ಭಕ್ತರು ಭಾಗವಹಿಸಿದ್ದರು.

ಪೂಜಾ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಆಚಾರ್ ಸ್ವಾಗತಿಸಿ, ಭಾಸ್ಕರ ದೇವಾಡಿಗ ವರದಿ ವಾಚಿಸಿದರು. ಬಹುಮಾನಗಳ ವಿವರಗಳ ಪಟ್ಟಿಯನ್ನು ಮಾಲಿನಿ ವಾಚಿಸಿದರು, ವಲಯ ಮೇಲ್ವಿಚಾರಕಿ ರುಕ್ಮಿಣಿ ವಂದಿಸಿದರು, ಪ್ರಕಾಶ್ ಹಾಗು ಸಂದೀಪ್ ಕಾರ್ಯಕ್ರಮ ನಿರೂಪಿಸಿದರು.
ವರದಿ : ಎಚ್. ಸುಶಾಂತ್ ಬೈಂದೂರು

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)