ಜೆಸಿಐ ಬೈಂದೂರು ಸಿಟಿ ವತಿಯಿಂದ ಸೆಲ್ಯೂಟ್ ದ ಸಲೈಂಟ್ ಕಾರ್ಯಕ್ರಮ

ಬೈಂದೂರು : ಜೆಸಿಐ ಬೈಂದೂರು ಸಿಟಿ ವತಿಯಿಂದ ಸೆಲ್ಯೂಟ್ ದ ಸಲೈಂಟ್ ಕಾರ್ಯಕ್ರಮ ಇತ್ತೀಚಿಗೆ ಬೈಂದೂರು ಮೂಕಾಂಬಿಕಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

1971ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಅಂದಿನ ಪೂರ್ವ ಪಾಕಿಸ್ತಾನದ ರಾಜಧಾನಿ ಡಾಕಾ ಪ್ರವೇಶಿಸಿದ ಸೇನೆಯ ಮುಂಚೂಣಿಯಲ್ಲಿ ಭಾಗವಹಿಸಿದ ಕ್ಯಾ. ಜಾನ್ಸಿ ಥಾಮಸ್ ಅವರನ್ನು ಜೆಸಿಐ ಬೈಂದೂರು ಸಿಟಿ ವತಿಯಿಂದ ಸನ್ಮಾನಿಸಲಾಯಿತು.

ಬಳಿಕ ಮಾತನಾಡಿ, 1984 ರಲ್ಲಿ ನಡೆದ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಅಮೃತಸರದ ಸ್ವರ್ಣಮಂದಿರ ಪ್ರವೇಶಿಸಿದ ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ದು ಅವಿಸ್ಮರಣೀಯ ಎಂದರು.

ಜೆಸಿಐ ಬೈಂದೂರು ಸಿಟಿಯ ಅಧ್ಯಕ್ಷ ಜೆಸಿ. ಮಣಿಕಂಠ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಜೆಸಿಐ ಬೈಂದೂರು ಸಿಟಿಯ ಜೆಸಿರೇಟ್ ಅಧ್ಯಕ್ಷೆ ಜೆಸಿ. ಪ್ರಿಯದರ್ಶಿನಿ ಬೆಸ್ಕೂರು, ಜೆಐಸಿ ಬೈಂದೂರು ಸಿಟಿ ಉಪಾಧ್ಯಕ್ಷರಾದ ಮಾಣಿಕ್ಯ ಹೋಬಳಿದಾರ್, ಕೆ.ನರೇಂದ್ರ ಶೇಟ್, ಅಶ್ರಫ್, ಹಾಗೂ ಜೆಸಿಐ ಬೈಂದೂರು ಸಿಟಿಯ ಸದಸ್ಯರು ಭಾಗವಹಿಸಿದ್ದರು.

ಜೆಸಿಐ ಬೈಂದೂರು ಸಿಟಿಯ ಪ್ರಧಾನ ಕಾರ್ಯದರ್ಶಿ ಜೆಸಿ ಎಚ್.ಸುಶಾಂತ್ ಬೈಂದೂರು ಸ್ವಾಗತಿಸಿ, ಕಾರ್ಯನಿರ್ವಹಿಸಿ, ವಂದಿಸಿದರು.

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)