ನಾಡ: ನಾಗಮಂಡಲದ ಚಪ್ಪರ ಮಹೂರ್ತ

ಬೈಂದೂರು : ಬೈಂದೂರು ತಾಲ್ಲೂಕಿನ ನಾಡ ಗ್ರಾಮದ ಸ್ನೇಹಲತಾ–ಚಂದ್ರ ಕೆ.ನಾಯ್ಕ್ ದಂಪತಿ ಏಪ್ರಿಲ್ 15ರಂದು ಅಲ್ಲಿನ ಹಾಡಿಗರಡಿ ದೈವಸ್ಥಾನದ ಹತ್ತಿರದ ಬೆದ್ರಾಡಿಮನೆ ಮೂಲ ನಾಗಬನದಲ್ಲಿ ನಡೆಸಲು ಉದ್ದೇಶಿಸಿರುವ ಚತುಃಪವಿತ್ರ ನಾಗಮಂಡಲದ ಚಪ್ಪರ ಮಹೂರ್ತ ಕಾರ್ಯಕ್ರಮ ಈಚೆಗೆ ನಡೆಯಿತು.

ಪ್ರಧಾನ ಪುರೋಹಿತ ವೆಂಕಟರಮಣ ಅವಭೃತರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನಡೆದುವು.

ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ, ಹಾಡಿಗರಡಿ ದೈವಸ್ಥಾನ ಸಮಿತಿಯ ಅಧ್ಯಕ್ಷ ನಾಗೇಶ ಪಿ. ಕಾಂಚನ್ ಬೆದ್ರಾಡಿಮನೆ, ಶ್ರೀರಾಮ ಮಂದಿರದ ಸತೀಶ ಎಂ.ನಾಯಕ್, ನಾಗಮಂಡಲದ ಸೇವಾರ್ಥಿ ಚಂದ್ರ ಕೆ.ನಾಯ್ಕ್, ಹಾಡಿಗರಡಿ ಪಾತ್ರಿ ವಿಜಯ ಅಮೀನ್, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ಶ್ರೀಯಾನ್, ಉಪೇಂದ್ರ ಪ್ರಭು, ಶರತ್ ಕುಮಾರ್ ಶೆಟ್ಟಿ, ನರಸಿಂಹ ಪೂಜಾರಿ, ಮಹಾಬಲ ಕೆ.ನಾಯ್ಕ್, ನಾರಾಯಣ ಕೆ.ನಾಯ್ಕ್, ಪ್ರಭಾಕರ ಎನ್.ಎಂ.ಬೆದ್ರಾಡಿಮನೆ ಮತ್ತು ಸಾರ್ವಜನಿಕರು ಇದ್ದರು.

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)