ಮೈತ್ರಿ ಸರ್ಕಾರದ ಜನಪರ ಯೋಜನೆಗಳ ನಮ್ಮ ಗೆಲುವಿಗೆ ಶ್ರೀರಕ್ಷೆ : ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ

ಬೈಂದೂರು : ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಜೆಡಿಎಸ್-ಕಾಂಗ್ರೆಸ್ ಜಂಟಿಯಾಗಿ ಪ್ರಚಾರ ಮಾಡಿ ಮೈತ್ರಿ ಸರರ್ಕಾರದ, ರೈತರ ಸಾಲ ಮನ್ನಾ ಮಾತ್ರಶ್ರೀ ಯೋಜನೆ, ಬೀದಿ ಬೀದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ಯೋಜನೆ, ಹೈನುಗಾರಿಕೆಗೆ, ಭತ್ತದ ಬೆಳೆಗಾರರಿಗೆÉ ಸಹಾಯ ಧನ ಯೋಜನೆ ಹೀಗೆ 10 ತಿಂಗಳ ಅವಧಿಯ ಹಲವು ಜನಪರ ಯೋಜನೆಗಳ ಕುರಿತು ಮತದಾರರಿಗೆ ತಿಳಿಸುವ ಕಾರ್ಯ ಆಗಬೇಕು ಹಾಗೂ ಬಿಜೆಪಿಯ ಸುಳ್ಳು ಆಶ್ವಾಸನೆಗೆ ಮತ್ತು ಭಾವನಾತ್ಮಕ ವಿಷಯಗಳಿಗೆ ಜನತೆ ಮರುಳಾಗದಂತೆ ಎಚ್ಚರಿಸುವ ದೊಡ್ಡ ಕಾರ್ಯ ಆದರೆ ಚುನಾವಣೆ ಗೆಲುವು ಸುಲಭವಾಗಲಿದೆ ಈ ಚುನಾವಣೆಯಲ್ಲಿ ಮೈತ್ರಿ ಸರಕಾರದ ಜನಪರ ಯೋಜನೆಯೇ ನಮ್ಮ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಹೇಳಿದರು.

ಅವರು ಗುರುವಾರ ಸಂಜೆ ಉಪ್ಪುಂದ ಶಂಕರ ಕಲಾ ಮಂದಿರದ ಸಮೃದ್ಧ ಸಭಾ ಭವನದಲ್ಲಿ ನಡೆದ ಬೈಂದೂರು ಬ್ಲಾಕ್ ಜೆಡಿಎಸ್ ಪದಾಧಿಕಾರಿಗಳ ಮತ್ತು ಕಾರ್ಯಕರ್ತ ಸಭೆಯನ್ನು ಉದ್ದೇಶಿಸಿ ಮಾತನಾಡಿ 7 ಜಿಲ್ಲಾ ಪಂಚಾಯತ್‍ಗಳ ವ್ಯಾಪ್ತಿಯ ಪಕ್ಷದ ಉಸ್ತುವಾರಿಗಳನ್ನು ನೇಮಿಸಲಾಯಿತು.

ಜೆಡಿಎಸ್ ಬೈಂದೂರು ಬ್ಲಾಕ್ ಅಧ್ಯಕ್ಷ ಯು. ಸಂದೇಶ್ ಭಟ್ ಅಧ್ಯಕ್ಷತೆ ವಹಿಸಿದ್ದು, ಸಭೆಯಲ್ಲಿ ರಾಜ್ಯ ಸಮಿತಿ ಸಂಘಟನಾ ಕಾರ್ಯದರ್ಶಿ ಜಯಕುಮಾರ್ ಪರ್ಕಳ, ರಾಜ್ಯ ಸಮಿತಿ ಕಾರ್ಯದರ್ಶಿ ಬಿ.ಟಿ.ಮಂಜುನಾಥ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಅಡಿಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತೀನ್ ಶೆಟ್ಟಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರೋಹಿತ್ ಕರಂಬಳ್ಳಿ, ಬ್ಲಾಕ್ ಕಾರ್ಯದರ್ಶಿ ಜಯಶೀಲಾ ಶೆಟ್ಟಿ, ಪಕ್ಷದ ಪ್ರಮುಖರಾದ ರವಿ ಶೆಟ್ಟಿ, ಯು. ರಮೇಶ್ ಕಾರಂತ್, ಯು ರಂಜಿತ್ ಕುಮಾರ್ ಶೆಟ್ಟಿ, ರಾಜು ದೇವಾಡಿಗ, ಮಂಜುನಾಥ ಖಾರ್ವಿ, ನಾಗೇಶ ದೇವಾಡಿಗ, ಮಾರುತಿ ಮೊಗವೀರ, ಸುದರ್ಶನ್ ಶೆಟ್ಟಿ, ಶರತಾ ಗೌಡ, ಗೋಪಾಲ ಪೂಜಾರಿ ಉಪಸ್ಥಿತರಿದ್ದರು.

ಬ್ಲಾಕ್ ಅಧ್ಯಕ್ಷ ಯು. ಸಂದೇಶ್ ಭಟ್ ಸ್ವಾಗತಿಸಿದರು. ಶ್ರೀಕಾಂತ್ ಅಡಿಗ ಪ್ರಾಸ್ತಾವಿಕ ಮಾತನಾಡಿದರು, ರವಿ ಶೆಟ್ಟಿ ವಂದಿಸಿದರು.

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)